Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರು ಯಾರೆಲ್ಲಾ?

ಬಾಲಿವುಡ್ ನ ಅತೀ ಹೆಚ್ಚು ಸಂಭಾವನೆ  ಪಡೆಯುವ ನಟರು ಯಾರೆಲ್ಲಾ?
ಮುಂಬೈ , ಶನಿವಾರ, 27 ಆಗಸ್ಟ್ 2016 (09:21 IST)
ಬಾಲಿವುಡ್ ನಲ್ಲಿ ಸದ್ಯ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಅಂದ್ರೆ ದೀಪಿಕಾ ಪಡುಕೋಣೆ. ಇವರು ಮೊನ್ನೆ ತಾನೇ ಪದ್ಮಾವತಿ ಸಿನಿಮಾಕ್ಕೆ ಅತೀ ಹೆಚ್ಚು ಸಂಭಾವನೆ ಪಡೆಯೋದರ ಮೂಲಕ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಅನ್ನೋ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೇ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರೂ ಕೂಡ ಒಬ್ಬರು.

ಆದ್ರೆ ಬಾಲಿವುಡ್ ನಟರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರು ಯಾರು ಅಂದ್ರೆ ನಾಲ್ಕೈದು ಹೆಸರುಗಳು ಕೇಳಿ ಬರುತ್ತಿದೆ.ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ , ಶಾರುಖ್ ಖಾನ್ ಅಕ್ಷಯ್ ಕುಮಾರ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ಇವರೆಲ್ಲಾ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಕ್ಕೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದ್ದಾರೆ.ಇನ್ನು ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ 20 ನಟರಲ್ಲಿ ಕಿಂಗ್ ಖಾನ್ 8ನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ ಅವರು ಹತ್ತನೇ ಸ್ಥಾನದಲ್ಲಿದ್ದಾರೆ. ಸಲ್ಮಾನ್ ಖಾನ್ ಅವರು 14 ನೇಸ್ಥಾನದಲ್ಲಿದ್ದಾರೆ.ಅಮಿತಾಬ್ 18ನೇ ಸ್ಥಾನದಲ್ಲಿದ್ದಾರೆ.

ಇನ್ನು ಬಾಕ್ಸಾಫೀಸ್ ನಲ್ಲಿ ನಟರ ಸಿನಿಮಾಗಳ ಅರ್ಭಟ ಜಾಸ್ತಿಯಾಗುತ್ತಿದ್ದಂತೆ ಅವರ ಡಿಮ್ಯಾಂಡ್ ಗಳು ಕೂಡ ಜಾಸ್ತಿಯಾಗುತ್ತಲೇ ಸಾಗುತ್ತಿದೆ.ಅದಕ್ಕೆ ಅನೇಕ ಉದಾಹರಣೆಗಳು ಬಾಲಿವುಡ್ ನಲ್ಲಿವೆ. ಸದ್ಯ ಶಾರುಖ್ ಖಾನ್ ಬಾಲಿವುಡ್ ನಲ್ಲಿ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ ಅಕ್ಷಯ್ ಕುಮಾರ್ ನಂತರದ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ ಸಲ್ಮಾನ್ ಖಾನ್ - ಮುನ್ನಿ