Select Your Language

Notifications

webdunia
webdunia
webdunia
webdunia

2000 ಕೋಟಿ ರೂ. ಬೃಹತ್ ಡ್ರಗ್ಸ್ ಹಗರಣದಲ್ಲಿ ಬಾಲಿವುಡ್ ನಟಿ ಫಿಕ್ಸ್

2000 ಕೋಟಿ ರೂ. ಬೃಹತ್ ಡ್ರಗ್ಸ್ ಹಗರಣದಲ್ಲಿ ಬಾಲಿವುಡ್ ನಟಿ ಫಿಕ್ಸ್
ಥಾಣೆ , ಶುಕ್ರವಾರ, 9 ಜೂನ್ 2017 (17:27 IST)
2000 ಕೋಟಿ ರೂ. ಬೃಹತ್ ಡ್ರಗ್ಸ್ ಕೇಸ್`ನಲ್ಲಿ ಬಾಲಿವುಡ್`ನ ಸೆಕ್ಸ್ ಸಿಂಬಲ್ ಎಂದೇ ಕರೆಯಲ್ಪಡುತ್ತಿದ್ದ ನಟಿ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ಎನ್ನಲಾದ ವಿಕ್ಕಿ ಗೋಸ್ವಾಮಿಯನ್ನ ಘೋಷಿತ ಅಪರಾಧಿಗಳೆಂದು ಥಾಣೆಯ ಎನ್`ಡಿಪಿ ವಿಶೇಷ ಕೋರ್ಟ್ ಘೋಷಿಸಿದೆ.
 

ಜನವರಿಯಲ್ಲಿ ಬಂಧಿತನಾಗಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಆರೋಪಿ ಕಿಶೋರ್ ಸಿಂಗ್ ರಾಥೋಡ್, ಮಮತಾ ಕುಲಕರ್ಣಿ ದಂಪತಿ ವಿರುದ್ಧ ಸ್ಫೋಟಕ ಮಾಹಿತಿಗಳನ್ನ ಬಿಚ್ಚಿಟ್ಟಿದ್ದ. ಜೂನ್ 8ರಂದು ಎಟಿಎಸ್`ನಿಂದ ಬಂಧನಕ್ಕೀಡಾದ ಮಾಜಿ ಶಾಸಕ ಭವ ಸಿಂಗ್ ರಾಥೋಡ್ ಪುತ್ರ ಸಹ ಮಮತಾ ಕುಲಕರ್ಣಿ ದಂಪತಿಯ ಕರ್ಮಕಾಂಡ ಬಿಚ್ಚಿಟ್ಟಿದ್ದ. 9 ತಿಂಗಳಿಂದ ತಲೆಮರೆಸಿಕೊಂಡಿದ್ದ ರಾಥೋಡ್`ನನ್ನ ಮಧ್ಯಪ್ರದೇಶದ ಛಂಬಲ್`ನಲ್ಲಿ ಬಂಧಿಸಲಾಗಿತ್ತು.

ಏಪ್ರಿಲ್ 2016ರಂದು ಸೊಲ್ಲಾಪುರದ ಕಾರ್ಖಾನೆವೊಂದರ ಮೇಲೆ ರೇಡ್ ಮಾಡಿದ್ದ ಥಾಣೆ ಪೊಲೀಸರು 2000 ಕೋಟಿ ರೂ. ಬೆಲೆ ಬಾಳುವ 18,627 ಕೆ.ಜಿ ಎಫೆಡ್ರೈನ್ ಡ್ರಗ್ಸ್ ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಇದರ ಹಿಂದೆ ದೊಡ್ಡ ದೊಡ್ಡ ಕುಳಗಳೇ ಇರುವುದು ಪತ್ತೆಯಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಸಾನಿಯಾ ಮಿರ್ಜಾ ಒಳ ಉಡುಪು ಕಾಣುವ ಫೋಟೋ ಪ್ರಕಟಿಸಿದ ರಾಮ್ ಗೋಪಾಲ್ ವರ್ಮಾ