Webdunia - Bharat's app for daily news and videos

Install App

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Sampriya
ಬುಧವಾರ, 11 ಸೆಪ್ಟಂಬರ್ 2024 (14:05 IST)
Photo Courtesy X
ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರ ದಾರುಣವಾಗಿ ಸಾವನ್ನಪ್ಪಿದ್ದಾರೆ. ಆರನೇ ಮಹಡಿಯಿಂದ ಅನಿಲ್‌ ಅರೋರಾ ಜಿಗಿದು ಆತ್ಮಹತ್ಯೆ ಮಾಡುಕೊಂಡಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ತಾವು ವಾಸಿಸುತ್ತಿದ್ದ ಬಾಂದ್ರಾ ಕಟ್ಟಡದ ಟೆರೇಸ್‌ ಮೇಲಿಂದ ಜಿಗಿದು ಅನಿಲ್‌ ಸಾವಿಗೆ ಶರಣಾಗಿದ್ದಾರೆ.  ಈವರೆಗೂ ಆತ್ಮಹತ್ಯೆಯ ಪತ್ರ ಸಿಕ್ಕಿಲ್ಲ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ.

ಘಟನೆಯ ನಂತರ ಮಲೈಕಾ ಕುಟುಂಬ ಮತ್ತು ಆಕೆಯ ಪರಿಚಯಸ್ಥರು ಆಘಾತಕ್ಕೊಳಗಾಗಿದ್ದಾರೆ. ಮಾಹಿತಿ ಪಡೆದ ಮುಂಬೈ ಪೊಲೀಸರು ನಟಿಯ ಮನೆಗೆ ಆಗಮಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಮಲೈಕಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಕೂಡ ಅವರ ಮನೆಗೆ ಧಾವಿಸಿದ್ದಾರೆ. ಅರ್ಬಾಜ್ ಖಾನ್ ಮಲೈಕಾ ಮನೆಯ ಹೊರಗೆ ಪೊಲೀಸರು ಮತ್ತು ಇತರ ಜನರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.  

ಅನಿಲ್ ಅರೋರಾ ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಪಂಜಾಬಿ ಮೂಲದವರಾದ ಅನಿಲ್ ಅರೋರ ಅವರು ಜಾಯ್ಸ್ ಪಾಲಿಕಾರ್ಪ್ ಅವರನ್ನು ಮದುವೆಯಾಗಿದ್ದರು. ಮಲೈಕಾ ಹುಟ್ಟಿದ ಬಳಿಕ ಅವರು ಡಿವೋರ್ಸ್ ಪಡೆದಿದ್ದರು.
 <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments