Publish Date: Tue, 08 Nov 2016 (13:42 IST)
Updated Date: Tue, 08 Nov 2016 (13:46 IST)
ಮುಂಬೈ: ಬಾಲಿವುಡ್ ಬೆಡಗಿ ಬಿಪಾಶಾ ಬಸು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಂದು ಇತ್ತೀಚೆಗೆ ಗಾಸಿಪ್ ಹರಡಿತ್ತು. ಅದನ್ನು ಸ್ವತಃ ಬಿಪಾಶಾ ಅಲ್ಲಗಳೆದಿದ್ದಾರೆ.
ಕಳೆದ ತಿಂಗಳು ಬಿಪಾಶಾ ಮತ್ತು ಪತಿ ಕರಣ್ ಗ್ರೋವ್ ಸಿಂಗ್ ವೈದ್ಯರ ಬಳಿಗೆ ಹೋದಾಗಿನಿಂದ ಬಿಪಾಶಾ ಗರ್ಭಿಣಿಯಾಗಿರಬೇಕೆಂದು ವರದಿಗಳು ಹರಿದಾಡುತ್ತಿತ್ತು. “ಇಂತಹ ಪ್ರಮುಖ ವಿಚಾರಗಳನ್ನು ನಮಗೇ ಬಿಡಿ. ದಯವಿಟ್ಟು ಗಾಸಿಪ್ ಹರಡಬೇಡಿ. ಇದೆಲ್ಲಾ ಸುಳ್ಳು ಕತೆ” ಎಂದು ಬಿಪಾಶಾ ಹೇಳಿಕೊಂಡಿದ್ದಾರೆ.
ಸದ್ಯ ಪತಿ ಜತೆ ಹಬ್ಬದ ಮೂಡ್ ನಲ್ಲಿರುವ ಬಿಪಾಶಾ ಅತ್ತೆ ಮನೆಯಲ್ಲಿ ಕಾಲ ಕಳೆಯುತ್ತಿರುವುದಾಗಿ ಟ್ವಿಟರ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ