Publish Date: Tue, 07 Jun 2016 (17:46 IST)
Updated Date: Tue, 07 Jun 2016 (17:53 IST)
ಬಾಲಿವುಡ್ ನಟಿ ಬಿಪಾಶಾ ಬಸು ಮೊನ್ನೆ ತಾನೆ ಕರಣ್ ಸಿಂಗ್ ಗ್ರೋವರ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಅದಾದ ಬಳಿಕ ಮತ್ತೆ ಬಿಪಾಶಾ ಹೊಸ ಹೇರ್‌ಸ್ಟೈಲ್ ಮೂಲಕ ಮತ್ತೆ ಮಿಂಚಿದ್ದಾಳೆ.. ತನ್ನ ನ್ಯೂ ಹೇರ್‌ಸ್ಟೈಲ್ ಬಗ್ಗೆ ಬಿಪಾಶಾ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾಳೆ.
ಸಮ್ಮರ್ ಟ್ರೆಂಡ್‌ನಲ್ಲಿ ಹೊಸ ಹೇರ್‌ಸ್ಟೈಲ್ ಮೂಲಕ ಕಾಣಿಸಿಡಿರುವ 37 ವ್ರಷದ ಬಿಪಾಶಾ ಬಸು.. ಇತ್ತೀಚೆಗೆ ನಟ ಕರಣ್ ಸಿಂಗ್ ಗ್ರೋವರ್‌ನ್ನು ವರಿಸಿದ್ದರು.
'ನನಗೆ ಶಾರ್ಟ್ ಹೇರ್ ತುಂಬಾ ಇಷ್ಟ.. ಅದಕ್ಕಾಗಿ ಕಟ್ ಮಾಡಿದ್ದೇನೆ.. ಆದ್ರೂ 'ಐ ಮಿಸ್ ಮೈ ಲಾಂಗ್ ಹೇರ್' ಎಂದು ಬಿಪಾಶಾ ಬರೆದುಕೊಂಡಿದ್ದಾಳೆ. ಕಂಗನಾ ಹಾಗೇ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿರುವ ಬಿಪ್ಸ್, ಇದೀಗ ಇದೇ ಹೇರ್ ಸ್ಟೈಲ್‌ನಲ್ಲಿ ಮಿಂಚಿರುವ ಮತ್ತೊಬ್ಬ ನಟಿಯರಲ್ಲಿ ಒಬ್ಬಳಾಗಿದ್ದಾಳೆ ಈ ಬ್ಯೂಟಿ ಸುಂದರಿ...
ಇನ್ನೂ ಬಿಪಾಶಾ ಕರಣ್ ಹಾಗೂ ಬಿಪಾಶಾ ಏಪ್ರಿಲ್ 30ಕ್ಕೆ ಮದುವೆಯಾಗಿದ್ದರು. ಬಿಪಾಶಾ ಮನೆಯವರ ಒಪ್ಪಿಗೆಯ ಮೇರೆಗೆ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ಮೆಹಂದಿ ಕಾರ್ಯಕ್ರಮ ಏಪ್ರಿಲ್ 28ಕ್ಕೆ ನಡೆದಿತ್ತು. ಬೆಂಗಾಲಿ ಶೈಲಿಯಲ್ಲಿ ಕರಣ್ -ಬಿಪಾಶಾ ಇಬ್ಬರು ಸಪ್ತಪದಿ ತುಳಿದಿದ್ದರು. ಮದುವೆಗೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಆಗಮಿಸಿ ಶುಭಾಷಯ ತಿಳಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ