Select Your Language

Notifications

webdunia
webdunia
webdunia
webdunia

ತಮ್ಮ ನಿವಾಸದಲ್ಲೇ ನೇಣು ಬಿಗಿದ ರೀತಿಯಲ್ಲಿ ನಟಿ ಅಂಜಲಿ ಮೃತದೇಹ ಪತ್ತೆ..

ತಮ್ಮ ನಿವಾಸದಲ್ಲೇ ನೇಣು ಬಿಗಿದ ರೀತಿಯಲ್ಲಿ ನಟಿ ಅಂಜಲಿ ಮೃತದೇಹ ಪತ್ತೆ..
ಮುಂಬೈ , ಸೋಮವಾರ, 19 ಜೂನ್ 2017 (17:38 IST)
ಮುಂಬೈ: ಭೋಜ್ ಪುರಿ ನಟಿ ಅಂಜಲಿ ಶ್ರೀವಾತ್ಸವ ಮೃತ ದೇಹ ನೇಣು ಬಿಗಿದುಕೊಂಡ ರೀತಿಯಲ್ಲಿ ಮುಂಬೈನ ಅವರ ಮನೆಯಲ್ಲಿ ಪತ್ತೆಯಾಗಿದೆ.
 
29 ವರ್ಷದ ಅಂಜಲಿ ಮುಂಬೈನ ಪಶ್ಚಿಮ ಅಂಧೇರಿಯಲ್ಲಿನ ತಮ್ಮ ನಿವಾಸದಲ್ಲೇ ಸಾವನ್ನಪ್ಪಿದ್ದು, ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
 
ಅಂಜಲಿ ಶ್ರೀವಾತ್ಸವ ಅವರಿಗೆ ಅವರ ಸಂಬಂಧಿಕರು ಕರೆ ಮಾಡಿದ್ದಾರೆ. ಆದರೆ ಅಂಜಲಿ ಕರೆ ಸ್ವೀಕರಿಸದೇ ಇದ್ದಾಗ ಕುಟಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಅಂತೆ ಪೊಲೀಸರು ಡುಪ್ಲಿಕ್ ಕೀ ಬಳಸಿ ಮನೆಯ ಬಾಗಿಲು ತೆರೆದಾಗ ಆಕೆಯ ಮೃತದೇಹ ಸಿಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.  ಅಂಜಲಿ ಮೃತದೇಹವನ್ನು ಚಾಪರ್ ಅಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಟಪ್ಪಾಂಗುಚ್ಚಿ ಹಾಡೊಂದಕ್ಕೆ ಗಾಯಕರಾದ ಪ್ರೇಮಕವಿ ಕೆ ಕಲ್ಯಾಣ್