Select Your Language

Notifications

webdunia
webdunia
webdunia
webdunia

ಗೋವಾ ಚಿತ್ರೋತ್ಸವದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂದ ಬೆಂಗಾಳಿ ನಿರ್ದೇಶಕ

ಗೋವಾ ಚಲನಚಿತ್ರೋತ್ಸವ
Panaji , ಮಂಗಳವಾರ, 22 ನವೆಂಬರ್ 2016 (13:43 IST)
ಪಣಜಿ: ಗೋವಾದಲ್ಲಿ ನಡೆಯುತ್ತಿರುವ 47ನೇ ಚಲನಚಿತ್ರೋತ್ಸವದಲ್ಲಿ ತಮ್ಮನ್ನು ಹಾಗೂ ಚಿತ್ರತಂಡದವರನ್ನು ಆಯೋಜಕರು ಅವಮಾನಿಸಿದ್ದಾರೆ ಎಂದು ಬೆಂಗಾಳಿ ನಿರ್ದೇಶಕ ಸೈಬಲ್ ಮಿತ್ರಾ ಆಪಾದಿಸಿದ್ದಾರೆ.

ಅವರ ನಿರ್ದೇಶನದ ಚಿತ್ರಾಕರ್ ಸಿನಿಮಾ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿತ್ತು. ಅದಕ್ಕಾಗಿ ಆಯೋಜಕರು ಅವರನ್ನು ಚಿತ್ರೋತ್ಸವಕ್ಕೆ ಆಹ್ವಾನಿಸಿದ್ದರು. ಆದರೆ ಇಲ್ಲಿಗೆ ಬಂದ ನಂತರ ನಮಗೆ ಉಳಿದುಕೊಳ್ಳಲು ವ್ಯವಸ್ಥೆ ಇರಲಿಲ್ಲ. ಹೋಟೆಲ್ ಹೊರಗಡೆ ಗಂಟೆಗಟ್ಟಲೆ ಕಾಯಿಸಿದರು. ನಂತರ ನಮ್ಮ ಊಟೋಪಚಾರದ ವ್ಯವಸ್ಥೆಯೂ ಮಾಡಿರಲಿಲ್ಲ.

ಊಟ ತಿಂಡಿಗಳ ವೆಚ್ಚವನ್ನು ನಾವೇ ಭರಿಸಬೇಕಾಯಿತು. ಆದರೆ ನೋಟು ನಿಷೇಧವಾಗಿರುವ ಈ ಸಂದರ್ಭದಲ್ಲಿ ನಮ್ಮ ಇಡೀ ಚಿತ್ರತಂಡಕ್ಕೆ ವೆಚ್ಚ ಮಾಡುವುದು ಕಷ್ಟವಾಯಿತು ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗುವಿಗೆ ತಂದೆಯಾದ ತೆಲುಗು ನಟ ಅಲ್ಲು ಅರ್ಜುನ್