Select Your Language

Notifications

webdunia
webdunia
webdunia
webdunia

ಹುಕ್ಕಾ ಹೀರುತ್ತಾ ಪೋಸು ಕೊಟ್ಟ ವಿದ್ಯಾ ಬಾಲನ್

ಹುಕ್ಕಾ ಹೀರುತ್ತಾ ಪೋಸು ಕೊಟ್ಟ ವಿದ್ಯಾ ಬಾಲನ್
Mumbai , ಮಂಗಳವಾರ, 7 ಮಾರ್ಚ್ 2017 (22:19 IST)
ಆರಂಭದಿಂದಲೂ ಬೋಲ್ಡ್ ಪಾತ್ರಗಳಿಗೆ ಹೆಸರಾದವರು ನಟಿ ವಿದ್ಯಾ ಬಾಲನ್. ಇದೀಗ ಅವರ 'ಬೇಗಂ ಜಾನ್’ ಚಿತ್ರ ಸಹ ಅದೇ ರೀತಿ ಹವಾ ಎಬ್ಬಿಸಿದೆ. ’ದಿ ಡರ್ಟಿ ಪಿಕ್ಚರ್’ ಮೂಲಕ ತಾವು ಯಾವುದೇ ತರಹದ ಪಾತ್ರಕ್ಕೂ ಸಿದ್ಧ ಎಂಬುದನ್ನು ನಿರೂಪಿಸಿಕೊಂಡಿದ್ದರು ವಿದ್ಯಾ. 
 
ಬಂಗಾಳಿ ನಿರ್ದೇಶಕ ಶ್ರೀಜಿತ್ ಮುಖರ್ಜಿ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಚಿತ್ರ ಬೇಗಂ ಜಾನ್. ಇದು ಬಂಗಾಳಿಯ ರಾಜ್‌ಕಹಿನಿ ಚಿತ್ರದ ರೀಮೇಕ್. ಇದೀಗ ಈ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಇದನ್ನು ಸ್ವತಃ ವಿದ್ಯಾ ಬಾಲನ್ ಅವರು ಶೇರ್ ಮಾಡಿಕೊಂಡಿದ್ದಾರೆ.
 
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿನ ವೇಶ್ಯಾವಾಟಿಕೆಯೊಂದರ ಕುರಿತಾದ ಕಥೆ ಇದು. ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದಾಗ ಈ ವೇಶ್ಯಾವಾಟಿಕೆಯನ್ನು ಎತ್ತಂಗಡಿ ಮಾಡುವಂತೆ ಬೇಗಂ ಜಾನ್‌ಗೆ ಅಧಿಕಾರಿಗಳು ತಾಕೀತು ಮಾಡುತ್ತಾರೆ. ಆ ಬಳಿಕ ಏನೆಲ್ಲಾ ಆಗುತ್ತದೆ ಎಂಬುದು ಕಥಾಹಂದರ. ಏಪ್ರಿಲ್ 14ರಂದು ಚಿತ್ರ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಸೇಡ್’ ಚಿತ್ರದ ನಾಯಕ ಲಕ್ಷ್ಮೀಶ್‌ಗೆ ಅಪಘಾತ, ಪರಿಸ್ಥಿತಿ ಗಂಭೀರ