Select Your Language

Notifications

webdunia
webdunia
webdunia
webdunia

ವೇಶ್ಯಾವಾಟಿಕೆ ನಿರ್ವಾಹಕಿಯಾಗಿ ವಿದ್ಯಾಬಾಲನ್

ವೇಶ್ಯಾವಾಟಿಕೆ ನಿರ್ವಾಹಕಿಯಾಗಿ ವಿದ್ಯಾಬಾಲನ್
Mumbai , ಶುಕ್ರವಾರ, 6 ಜನವರಿ 2017 (07:11 IST)
ಭಿನ್ನವಾದ ಪಾತ್ರಗಳು, ಗ್ಲಾಮರ್ ಇರುವ ಚಿತ್ರಗಳಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯಿಸುತ್ತಾ ಬಂದಿದ್ದಾರೆ. ಡರ್ಟಿ ಪಿಕ್ಚರ್, ಕಹಾನಿ, ಕಹಾನಿ 2 ಚಿತ್ರಗಳೆ ಇದಕ್ಕೆ ನಿದರ್ಶನ. ಇದೀಗ ಅವರು ’ಬೇಗಂ ಜಾನ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಅವರದು ವೇಶ್ಯಾವಾಟಿಕೆ ನಿರ್ವಾಹಕಿಯಾಗಿ ಕಾಣಿಸುತ್ತಿರುವುದು ವಿಶೇಷ.
 
ಈ ಚಿತ್ರ ಒಂದು ಸ್ಟಿಲ್ ಈಗ ರಿಲೀಸ್ ಆಗಿದ್ದು ಸಾಮಾಜಿಕ ತಾಣಗಳಲ್ಲಿ ಸುತ್ತಾಡುತ್ತಿದೆ. ಫೋಟೋದಲ್ಲಿ ವಿದ್ಯಾ ಬಾಲನ್ ಹುಕ್ಕಾ ಹೀರುತ್ತಾ ಕಾಣಿಸಿಕೊಂಡಿರುವ ಭಂಗಿ ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ತನ್ನ ಗೆಟಪ್ ಮೂಲಕ ವಿದ್ಯಾ ಬಾಲನ್ ಮತ್ತೆ ಸಿನಿ ರಸಿಕರ ಗಮನಸೆಳೆದಿದ್ದಾರೆ.
 
ಬಂಗಾಳಿ ನಿರ್ದೇಶಕ ಶ್ರೀಜಿತ್ ಮುಖರ್ಜಿ ಬಾಲಿವುಡ್‍ನಲ್ಲಿ ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಚಿತ್ರವಿದು. ಬಂಗಾಳಿಯಲ್ಲಿ ರಾಜ್ ಕಹಿನ್ ಹೆಸರಿನಲ್ಲಿ ಶ್ರೀಜಿತ್ ಆಕ್ಷನ್ ಕಟ್ ಹೇಳಿರುವ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ಪಾತ್ರವರ್ಗದಲ್ಲಿ ನಾಸಿರುದ್ದೀನ್ ಶಾ, ರಾಜೇಶ್ ಶರ್ಮಾ, ಗೋಹರ್ ಖಾನ್, ಪಲ್ಲವಿ ಶಾರದ ಮುಂತಾದರು ಮುಖ್ಯಭೂಮಿಕೆಯಲ್ಲಿದ್ದಾರೆ. ಮಾರ್ಚ್ ವೇಳೆಗೆ ಬೇಗಂ ಜಾನ್ ಚಿತ್ರ ತೆರೆಕಾಣಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಫೋಟೋ ತೆಗೆದಿದ್ದಕ್ಕೆ ಶಾಹಿದ್ ಕಪೂರ್ ಗರಂ