Select Your Language

Notifications

webdunia
webdunia
webdunia
webdunia

ಬಾಸ್ಕೆಟ್ ಬಾಲ್ ಆಡೋದಕ್ಕೆ ಅರ್ಜುನ್ ಕಪೂರ್ ತರಬೇತಿ ಪಡೆದಿದ್ದು ಹೇಗೆ?

ಬಾಸ್ಕೆಟ್ ಬಾಲ್ ಆಡೋದಕ್ಕೆ ಅರ್ಜುನ್ ಕಪೂರ್ ತರಬೇತಿ ಪಡೆದಿದ್ದು ಹೇಗೆ?
ಮುಂಬೈ , ಶನಿವಾರ, 16 ಜುಲೈ 2016 (10:39 IST)
ಕೀ ಆಂಡ್ ಕಾ ಸಿನಿಮಾದ ಬಳಿಕ ನಟ ಅರ್ಜುನ್ ಕಪೂರ್ ಅವರು ಅಭಿನಯಿಸುತ್ತಿರುವ ಸಿನಿಮಾ ಹಾಫ್ ಗರ್ಲ್ ಫ್ರೆಂಡ್. ಈ ಸಿನಿಮಾದಲ್ಲಿ ಅರ್ಜುನ್ ಕಪೂರ್ ಅವರು ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.ಆದ್ರೆ ಸಿನಿಮಾದ ಪಾತ್ರಕ್ಕಾಗಿ ಅರ್ಜುನ್ ಕಪೂರ್ ಅವರು ಸಾಕಷ್ಟು ಕಸರತ್ತು ಮಾಡಿದ್ದಾರಂತೆ.

ಒಂದು ಸಿನಿಮಾದ ಮುಖಾಂತರ ಪ್ರೇಕ್ಷಕರನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಸಿನಿಮಾ ನಟರು ಮನೋರಂಜಿಸಬೇಕಾದ್ರೆ ಅವರು ಎಷ್ಟೆಲ್ಲಾ ಕಷ್ಟಪಡುತ್ತಾರೆ ಅನ್ನೋದಕ್ಕೆ ಉದಾಹರಣೆ ನಟ ಅರ್ಜುನ್ ಕಪೂರ್. ಅರ್ಜುನ್ ಕಪೂರ್ ಸದ್ಯ ಅಭಿನಯಿಸುತ್ತಿರುವ ಹಾಫ್ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಆದ್ರೆ ಈ ಪಾತ್ರವನ್ನು ಮಾಡೋದಕ್ಕೆ ಅವರು ಸಾಕಷ್ಟು ತರಬೇತಿ ಪಡೆದಿದ್ದಾರಂತೆ.ಅಮೇರಿಕಾ ಹಾಗೂ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ವತಿಯಿಂದ ಸಾಕಷ್ಟು ತರಬೇತಿ ಪಡೆದಿದ್ದಾರಂತೆ. ಸುಮಾರು ಎರಡೂವರೆ ತಿಂಗಳುಗಳ ಕಾಲ ಅರ್ಜುನ್ ಇವರ ಗರಡಿಯಲ್ಲಿ ಪಳಗಿದ್ದಾರಂತೆ.
 
ಇನ್ನು ತಮ್ಮ ಕೀ ಆಂಡ್ ಕ ಸಿನಿಮಾ ರಿಲೀಸ್ ಆದ ಕೂಡಲೇ ಅರ್ಜುನ್ ಈ ಸಿನಿಮಾಕ್ಕಾಗಿ ತಯಾರಿ ಶುರು ಮಾಡಿದ್ದರಂತೆ.ಇನ್ನು ಈಗಗಾಲೇ ಬಿಡುಗಡೆಯಾಗಿರುವ ಸಿನಿಮಾ ಪ್ರೋಮೋದಲ್ಲೂ ಅರ್ಜುನ್ ಅವರು ಬಾಸ್ಕೆಟ್ ಬಾಲ್ ಆಡುವಂತಹ ದೃಶ್ಯಗಳಿವೆ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಲು ಭರ್ಜರಿ ದಾಖಲೆ..ಗೂಗಲ್ ಸರ್ಚ್‌ಗೆ ಒಳಗಾದ ನಟರಲ್ಲಿ ಸಲ್ಮಾನ್‌ಗೆ ಮೊದಲ ಸ್ಥಾನ