Publish Date: Mon, 13 Jul 2015 (15:48 IST)
Updated Date: Mon, 13 Jul 2015 (15:51 IST)
ವಿಶ್ವದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಹಾಲಿವುಡ್‍ನಲ್ಲೂ ರಿಮೇಕ್ ಆಗಲಿದೆ ಎಂಬ ಸುದ್ದಿ ಬಂದಿದೆ.
ಹಾಲಿವುಡ್‍ನ ಪ್ರಸಿದ್ಧ ಸಿನಿಮಾ ನಿರ್ಮಾಣ ಕಂಪನಿಯೊಂದು ಬಾಹುಬಲಿಯ ರಿಮೇಕ್ ಹಕ್ಕನ್ನು ಖರೀದಿಸಲು ತುದಿಗಾಲಲ್ಲಿ ನಿಂತಿದೆ ಎಂಬ ಮಾಹಿತಿ ಹರಿದು ಬಂದಿದೆ. ಅಮೆರಿಕದ ಕಂಪೆನಿಯ ಈ ಪ್ರಸ್ತಾವ ನಿರ್ದೆಶಕ ರಾಜಮೌಳಿ ಅವರನ್ನು ಒಂದು ಕ್ಷಣ ದಂಗು ಬಡಿಸಿಬಿಟ್ಟಿತಂತೆ. ಆದರೆ ಈ ಕುರಿತು ಅವರಿನ್ನೂ ಒಪ್ಪಿಗೆ ನೀಡಿಲ್ಲ. ಚಿತ್ರ ತಂಡದ ಜತೆ ಚರ್ಚಿಸಿ ಈ ಕುರಿತು ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.
ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಅಬ್ಬರಿಸುತ್ತಿದ್ದು, ಅಮೇರಿಕದಲ್ಲಿ ಅಮಿರ್ ಖಾನ್ ಅವರ ಅಭಿನಯದ ಸಿನಿಮಾ ಪೀಕೆ ದಾಖಲೆಯನ್ನು ಅಳಿಸಿ ಮುಂದೆ ಹೋಗುತ್ತಿದೆ. ಅಮೇರಿಕದಲ್ಲಿ ಪೀಕೆ ಮೊದಲ ದಿನದ ಗಳಿಸಿದ್ದು 6 ಕೋಟಿಯಾದರೆ, ಬಾಹುಬಲಿ ಒಂದೇ ದಿನಕ್ಕೆ 8.15 ಕೋಟಿಯನ್ನು ತನ್ನದಾಗಿಸಿ ಕೊಂಡಿದೆ.
ಭಾರತದಲ್ಲಿ ಎರಡು ದಿನಕ್ಕೆ ಬಾಹುಬಲಿ ಗಳಿಕೆ 140 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ.