Select Your Language

Notifications

webdunia
webdunia
webdunia
webdunia

ಬಾಘೀ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧಮಾಕಾ...100 ಕೋಟಿ ಕೊಳ್ಳೆ ಹೊಡೆದ ಚಿತ್ರ

Baaghi box office
ಮುಂಬೈ , ಶನಿವಾರ, 7 ಮೇ 2016 (11:38 IST)
ಟೈಗರ್ ಶ್ರಾಫ್ ಹಾಗೂ ಶ್ರದ್ಧಾ ಕಪೂರ್ ಅಭಿನಯದ ಬಾಘೀ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಕೊಳ್ಳೆ ಹೊಡೆದಿದೆ... ವರ್ಲ್ಡ್‌ವೈಡ್ ಚಿತ್ರ 100 ಕೋಟಿಯಷ್ಟು ಕ್ರಾಸ್ ಮಾಡಿದೆ. ಬಾಘೀ ಚಿತ್ರವನ್ನು ಹೆಚ್ಚು ಪ್ರೇಕ್ಷಕರು ಲೈಕ್ ಮಾಡ್ತಿದ್ದಾರೆ. 
ಯೆಸ್, 'ಬಾಘೀ' ಚಿತ್ರದ ಯಶಸ್ಸಿನ ಅಲೆಯಲ್ಲಿ ತೆಲುತ್ತಿದೆ. ಚಿತ್ರವು ಎಲ್ಲೆಡೆ ರಿಲೀಸ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ನಟ ಟೈಗರ್ ಶ್ರಾಫ್ ಕೆರಿಯರ್‌ ಮತ್ತಷ್ಟು ಶೈನ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.. ಇದು ನಟ ಟೈಗರ್ ಕೆರಿಯರ್‌ಗೆ ಬಿಗ್ ಹಿಟ್ ನೀಡಿದೆ. ಎಲ್ಲೆಡೆ ಟೈಗರ್ ಬಗ್ಗೆ ಚರ್ಚೆಗಳು ನಡೆದಿವೆಯಂತೆ.. 

 ತೆರೆ ಕಂಡ ಮೊದಲ ದಿನದಲ್ಲೇ 11.87 ಕೋಟಿ ಗಳಿಕೆ ಕಂಡಿದೆ. ಪ್ರೇಕ್ಷಕರು ಈ ಚಿತ್ರವನ್ನು ಲೈಕ್ ಮಾಡ್ತಿದ್ದಾರೆ. ಸಬೀರ್ ಖಾನ್ ನಿರ್ಮಾಣದ ಬಾಘೀ ಚಿತ್ರದಲ್ಲಿ ಶ್ರದ್ಧಾ  ಕಪೂರ್ ಹಾಗೂ ಟೈಗರ್ ಶ್ರಾಫ್ ಜೋಡಿ ಸಖತ್ ಆಗಿ ಮೂಡಿ ಬಂದಿದೆ. ಈಗಾಗ್ಲೇ ಚಿತ್ರದ ಟ್ರೇಲರ್, ಸಾಂಗ್ಸ್‌ಗಳು ಸಿನಿ ರಸಿಕರಿಗೆ ಇಷ್ಟವಾಗ್ತಿವೆ..
 
ಇನ್ನೂ ಶ್ರದ್ಧಾ ಕಪೂರ್ ಹಾಗೂ ಟೈಗರ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ... ಚಿತ್ರ ಬಿಡುಗಡೆಯಾದಾಗಿನಿಂದ ಚಿತ್ರವನ್ನು ನೋಡುತ್ತಾ ಬರುತ್ತಿದ್ದಾರೆ ಪ್ರೇಕ್ಷಕರು.. ಅಲ್ಲದೇ ಚಿತ್ರವು ಸೂಪರ್ ಆಗಿದೆ ಎಂದು ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಹೃತಿಕ್ ಅಮ್ಮನಿಗೆ ಆ್ಯಕ್ಟ್ ಮಾಡಲು ಆಫರ್ ನೀಡಿದ್ದಾರಾ ರಿಚಾ ಚಡ್ಡಾ?