Select Your Language

Notifications

webdunia
webdunia
webdunia
webdunia

’ಪದ್ಮಾವತಿ’ ಚಿತ್ರೀಕರಣದಲ್ಲಿ ಎಡವಟ್ಟು

’ಪದ್ಮಾವತಿ’ ಚಿತ್ರೀಕರಣದಲ್ಲಿ ಎಡವಟ್ಟು
Mumbai , ಭಾನುವಾರ, 29 ಜನವರಿ 2017 (08:36 IST)
ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಪ್ರತಿಷ್ಟಿತ ಚಿತ್ರ ಪದ್ಮಾವತಿ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ರಾಜಸ್ತಾನದ ಜೈಗಢ್ ಕೋಟೆಯಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ರಾಣಿ ಪದ್ಮಾವತಿ ಕುರಿತು ತಪ್ಪಾಗಿ ತೋರಿಸಲಾಗುತ್ತಿದೆ ಎಂದು ಶ್ರೀರಾಜ್‌ಪುತ್ ಕರ್ಣಿಸೇನ ಸಂಸ್ಥೆ ಕಾರ್ಯಕರ್ತರು ಚಿತ್ರೀಕರಣಕ್ಕೆ ತೊಂದರೆ ಮಾಡಿದ್ದಾರೆ.
 
ಭನ್ಸಾಲಿ ಮೇಲೆ ಕೈಮಾಡಿ, ಕ್ಯಾಮೆರಾ ಮತ್ತು ಲೈಟ್ಸ್ ಹೊಡೆದುಹಾಕಿದ್ದಾರೆ. ಇದರಿಂದ ಜೈಗಢ ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು. ಕೂಡಲೆ ಚಿತ್ರೀಕರಣವನ್ನು ನಿಲ್ಲಿಸಿ ಪೊಲೀಸರಿಗೆ ಸಮಾಚಾರ ಕೊಟ್ಟಿದ್ದಾರೆ ಭನ್ಸಾಲಿ.
 
ಈ ಹಿಂದೊಮ್ಮೆ ಇದೇ ಕರ್ಣಿಸೇನ ಕಾರ್ಯಕರ್ತರು ರಾಜಸ್ಥಾನದಲ್ಲಿ ಹೃತಿಕ್, ಐಶ್ವರ್ಯಾ ರೈ ಅಭಿನಯದ ಜೋಧಾ ಅಕ್ಬರ್ ಚಿತ್ರದಲ್ಲಿ ಜಯಪುರ ಯುವರಾಣಿ ಜೋಧಾರನ್ನು ತಪ್ಪಾಗಿ ತೋರಿಸುತ್ತಿದ್ದಾರೆಂದು, ಜೋಧಾ ಮತ್ತು ಅಕ್ಬರ್‌ಗೆ ಮದುವೆಯೇ ಆಗಲಿಲ್ಲವೆಂದು ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದರು.
 
ಭನ್ಸಾಲಿಯ ಮತ್ತೊಂದು ಚಿತ್ರ ಬಾಜಿರಾವ್ ಮಸ್ತಾನಿ ಚಿತ್ರೀಕರಣದ ವೇಳೆಯೂ ಇದೇ ರೀತಿ ಗಲಾಟೆ ಗದ್ದಲ ನಡೆದಿತ್ತು. ಚರಿತ್ರೆಯನ್ನು ತಿರುಚಿ ಸಿನಿಮಾ ತೆಗೆದರೆ ನಾವು ಸುಮ್ಮನಿರಲ್ಲ ಎಂದು ಕರ್ಣಿಕ ಕಾರ್ಯಕರ್ತರು ಎಚ್ಚರಿಸಿದ್ದಾರೆ. ಆದರೆ ಈ ಸಂಬಂಧ ಭನ್ಸಾಲಿ ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಜನಿಕಾಂತ್ 2.0 ಟೀಸರ್ ಬಿಡುಗಡೆ ದಿನಾಂಕ ಫಿಕ್ಸ್