Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

Sampriya
ಬುಧವಾರ, 11 ಜೂನ್ 2025 (16:58 IST)
Photo Courtesy X
ಮುಂಬೈ: ಬಾಲಿವುಡ್ ನಟ, ಸಿನಿಮಾ ನಿರ್ಮಾಪಕ ಅರ್ಬಾಜ್ ಖಾನ್ ಇದಿಗ ಎರಡನೇ ಬಾರೀ ತಂದೆಯಾಗುತ್ತಿದ್ದಾರೆ. 

ಡಿಸೆಂಬರ್ 2023 ರಲ್ಲಿ ಮೇಕಪ್ ಆರ್ಟಿಸ್ಟ್‌ ಶುರಾ ಖಾನ್ ಅವರನ್ನು ವಿವಾಹವಾದ ನಟ ಈಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಪತ್ನಿಯ ಗರ್ಭಧಾರಣೆಯನ್ನು ದೃಢಪಡಿಸಿದರು. 

ಎಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, 57 ವರ್ಷದ ಅರ್ಬಾಜ್ ಖಾನ್, ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ 35 ವರ್ಷದ ಶುರಾ ಖಾನ್ ಬಗ್ಗೆ ಮಾತನಾಡಿದರು. "ಪ್ರೆಗ್ನೆನ್ಸಿ ವಿಚಾರವನ್ನು ನಾವು ನಿರಾಕರಿಸುತ್ತಿಲ್ಲ. ಈ ವಿಷಯ ನಮ್ಮ ಕುಟುಂಬಕ್ಕೆ ತಿಳಿದಿದ್ದು, ಈ ವಿಚಾರವನ್ನು ಇದೀಗ ಎಲ್ಲರ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ಪ್ರಸ್ತುತ ನಮ್ಮಿಬ್ಬರ ಜೀವನದಲ್ಲಿ ಬಹಳ ರೋಮಾಂಚಕಾರಿ ಸಮಯ. ನಾವು ಸಂತೋಷ ಮತ್ತು ಉತ್ಸುಕರಾಗಿದ್ದೇವೆ. ನಾವು ಈ ಹೊಸ ಜೀವನವನ್ನು ನಮ್ಮ ಜೀವನದಲ್ಲಿ ಸ್ವಾಗತಿಸಲಿದ್ದೇವೆ ಎಂದು ಹೇಳಿದ್ದಾರೆ. 

ಅರ್ಬಾಜ್ ಖಾನ್ ಈ ಹಿಂದೆ ನಟಿ ಮಲೈಕಾ ಅರೋರಾ (51) ಅವರನ್ನು ವಿವಾಹವಾಗಿದ್ದರು. 20 ವರ್ಷಗಳ ದಾಂಪತ್ಯದ ನಂತರ ಅವರು 2019 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಅರ್ಹಾನ್ ಎಂಬ 22 ವರ್ಷದ ಗಂಡು ಮಗುವಿದೆ.

ಅರ್ಬಾಜ್ ಖಾನ್ ಮತ್ತು ಶುರಾ ಖಾನ್ 2023 ರಲ್ಲಿ ಆತ್ಮೀಯ ವಿವಾಹ ಸಮಾರಂಭದಲ್ಲಿ ವಿವಾಹವಾದರು. ಅವರು ಡಿಸೆಂಬರ್ 2024 ರಲ್ಲಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು. ಈ ದಿನವನ್ನು ಗುರುತಿಸಲು ಶುರಾ ಇನ್‌ಸ್ಟಾಗ್ರಾಮ್‌ನಲ್ಲಿ ಸಂತೋಷದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಮುಂದಿನ ಸುದ್ದಿ
Show comments