Select Your Language

Notifications

webdunia
webdunia
webdunia
webdunia

ತನ್ನ ಸಹೋದರಿಯರ ಪರವಾಗಿ ನಿಂತ ಅಂಶುಲಾ ಕಪೂರ್..!!

ತನ್ನ ಸಹೋದರಿಯರ ಪರವಾಗಿ ನಿಂತ ಅಂಶುಲಾ ಕಪೂರ್..!!

ನಾಗಶ್ರೀ ಭಟ್

ಬೆಂಗಳೂರು , ಸೋಮವಾರ, 5 ಮಾರ್ಚ್ 2018 (18:35 IST)
ಬೋನಿ ಕಪೂರ್ ತಮ್ಮ ಎರಡನೆಯ ಪತ್ನಿ ಶ್ರೀದೇವಿಯವರನ್ನು ಕಳೆದುಕೊಂಡಿರುವ ದುಃಖದಲ್ಲಿರುವಾಗ, ಅವರ ಸಂಪೂರ್ಣ ಕುಟುಂಬ ಅವರ ಜೊತೆ ನಿಂತು ಬೆಂಬಲವನ್ನು ನೀಡುತ್ತಿದ್ದಾರೆ. ಇದನ್ನು ಪಡೆಯಲು ಅವರು ಪೂರ್ವ ಜನ್ಮದಲ್ಲಿ ಪುಣ್ಯವನ್ನೇ ಮಾಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಬೋನಿ ಕಪೂರ್ ಅವರ ಮೊದಲ ಪತ್ನಿಯ ಮಗ ಅರ್ಜುನ್ ಮತ್ತು ಮಗಳು ಅಂಶುಲಾ ಕಪೂರ್ ತಮ್ಮ ತಂದೆ ಮತ್ತು ಸಹೋದರಿಯರಾದ ಜಾನ್ಹವಿ ಮತ್ತು ಖುಷಿ ಕಪೂರ್ ಬೆಂಬಲಕ್ಕೆ ನಿಂತಿದ್ದಾರೆ.
ಅಂಶುಲಾ ಇತ್ತೀಚೆಗೆ ಷೆರಿಲ್ ಕ್ರೌ ಅವರ “ಎಷ್ಟೇ ಅಸ್ತವ್ಯಸ್ಥವಾಗಿದ್ದರೂ, ಕಾಡು ಹೂಗಳು ಎಲ್ಲಿಯಾದರೂ ಅರಳುತ್ತವೆ” ಎನ್ನುವ ನುಡಿಯನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಅಂಶುಲಾ ಅವರ ಫ್ಯಾನ್ ಒಬ್ಬರು ಸಹೋದರಿಯರಾದ ಜಾನ್ಹವಿ ಮತ್ತು ಖುಷಿ ಕಪೂರ್ ಅವರ ಕುರಿತು ದುರುದ್ದೇಶಪೂರಿತ ಕಾಮೆಂಟ್‌ಗಳನ್ನು ಮಾಡಿದ್ದ ಘಟನೆ ನಡೆದಿದೆ. ಆ ಕಾಮೆಂಟ್ ಅನ್ನು ಅಳಿಸಿದ ಅಂಶುಲಾ ಕಾಮೆಂಟ್ ಮಾಡಿದವರಿಗೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ.
 
ಕಾಮೆಂಟ್ ಅನ್ನು ಅಳಿಸಿ, "ಹಾಯ್, ದುರುದ್ದೇಶಪೂರಿತ ಭಾಷಣವನ್ನು ವಿಶೇಷವಾಗಿ ನನ್ನ ಸಹೋದರಿಯರಿಗೆ ಬಳಸದಂತೆ ನಾನು ನಿಮ್ಮನ್ನು ವಿನಂತಿಸುತ್ತಿದ್ದೇನೆ, ನಾನು ಅದನ್ನು ಪ್ರಶಂಸಿಸುವುದಿಲ್ಲ ಮತ್ತು ಆದ್ದರಿಂದ ನಿಮ್ಮ ಕಾಮೆಂಟ್‌ಗಳನ್ನು ಅಳಿಸಿದ್ದೇನೆ. ನನ್ನ ಅಣ್ಣ ಮತ್ತು ನನ್ನ ಕುರಿತು ನಿಮಗಿರುವ ಉತ್ಸಾಹ ಮತ್ತು ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ, ಕೇವಲ ಒಂದು ಸಣ್ಣ ತಿದ್ದುಪಡಿ - ನಾನು ಭಾರತದ ಹೊರಗೆ ಎಂದೂ ಕೆಲಸ ಮಾಡುತ್ತಿರಲಿಲ್ಲ. ದಯವಿಟ್ಟು ಸಂತೋಷ ಮತ್ತು ಉತ್ತಮ ಗುಣಗಳನ್ನು ಹರಡಿಕೊಳ್ಳೋಣ. ಪ್ರೀತಿಗಾಗಿ ಧನ್ಯವಾದಗಳು" ಎಂದು ಕಾಮೆಂಟ್ ಮಾಡುವ ಮೂಲಕ ಅಂಶುಲಾ ತನ್ನ ಸಹೋದರಿಯರ ಪರವಾಗಿ ನಿಂತಿದ್ದಾರೆ. ತಮ್ಮ ಕುಟುಂಬದ ನಡುವಿನ ವೈಶಮ್ಯಗಳು ಏನೇ ಇದ್ದರೂ ದುಃಖದ ಸಮಯದಲ್ಲಿ ಜೊತೆಯಾಗಿ ಎದುರಿಸುತ್ತಿರುವ ಬೋನಿ ಕಪೂರ್ ಕುಟುಂಬವನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಲಿಯೋನ್ ಮಡಿಲಿಗೆ 2 ಗಂಡು ಮಕ್ಕಳ ಸೇರ್ಪಡೆ!