Select Your Language

Notifications

webdunia
webdunia
webdunia
webdunia

ಮುಂದಿನ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜತೆ ಅನುಷ್ಕಾ ಶೆಟ್ಟಿ

ಮುಂದಿನ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜತೆ ಅನುಷ್ಕಾ ಶೆಟ್ಟಿ
ಮುಂಬೈ , ಮಂಗಳವಾರ, 24 ಮೇ 2016 (19:09 IST)
ಮುಂಬರುವ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮೆಗಾಸ್ಟಾರ್ ಚಿರಂಜೀವಿ ಜತೆ ನಟಿಸಲಿದ್ದಾರೆ. ಈ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಚಿತ್ರ ಚಿರಂಜೀವಿಯವರ 150ನೇ ಚಿತ್ರ. ಈ ಹಿನ್ನೆಲೆಯಲ್ಲಿ ಈ ಚಿತ್ರದಲ್ಲಿ ಚಿರಂಜೀವಿ ಜತೆ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುತ್ತಿರುವುದು ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕೂತುಹಲ ಮೂಡಿಸಿದೆ. 
ಇನ್ನೂ ಈ ಚಿತ್ರ ತಮಿಳು ಚಿತ್ರದ ರಿಮೇಕ್ ಅಂತ ಹೇಳಲಾಗ್ತಿದೆ. ಚಿತ್ರವನ್ನು  ಚಿರಂಜೀವಿ ಪುತ್ರ ರಾಮ್ ಚರಣ್ ನಿರ್ಮಾಣ ಮಾಡುತ್ತಿದ್ದಾರೆ.  ಎಆರ್ ಮುರ್ಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.
 
ಆದ್ರೆ ಈ ಚಿತ್ರದಲ್ಲಿ ಚಿರಂಜೀವಿ ಜತೆಗೆ ಯಾವ ನಟಿ ಅಭಿನಯಿಸುತ್ತಾರೆ ಎಂಬ ಪ್ರಶ್ನೆ ಇತ್ತು. ಚಿರಂಜೀವಿ ಜತೆಗೆ ನಯನಾತಾರಾ ಹೆಸರು ಕೇಳಿ ಬಂದಿತ್ತು. ಆದರೆ ಫೈನಲ್ ಆಗಿ ಅನುಷ್ಕಾ ಶೆಟ್ಟಿ ಹೆಸರು ಕೇಳಿ ಬಂದಿದೆ. ಅಲ್ಲದೇ ಅನುಷ್ಕಾ ಮತ್ತೆರೆಡು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾಳೆ. ಬಾಹುಬಲಿ-2 ಹಾಗೂ ಬಾಘ್‌ಮತಿ ಚಿತ್ರಗಳಲ್ಲಿ, ಆದರೆ ಈ ಚಿತ್ರಕ್ಕಾಗಿ ಡೇಟ್ಸ್‌ ಅಡ್ಜಸ್ಟ್ ಮಾಡಿಕೊಳ್ಳಲಿದ್ದಾರಂತೆ. 
 
ಈ ಹಿಂದೆ 2006ರಲ್ಲಿ ಚಿತ್ರದಲ್ಲಿ ಚಿರಂಜೀವಿ ಜತೆ ನಟಿಸಿದ್ದ ಅನುಷ್ಕಾ. ಚಿತ್ರದ ಒಂದು ಸಾಂಗ್‌ನಲ್ಲಿ ಮಾತ್ರ ಅನುಷ್ಕಾ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಚಿರಂಜೀವಿ ಜತೆಗೆ ಅನುಷ್ಕಾ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪರ್ಪಲ್,ಬ್ಲ್ಯೂ ಬಳಿಕ.. ಇದೀಗ ಸನ್ನಿಯ ಪಿಂಕ್ ಬಣ್ಣದ ಹೆರ್‌ಸ್ಟೈಲ್