ಮತ್ತೊಮ್ಮೆ ಟ್ರೋಲ್‌ಗೆ ಒಳಗಾದ ಅನುಷ್ಕಾ ಶರ್ಮಾ..

Webdunia
ಬುಧವಾರ, 22 ಆಗಸ್ಟ್ 2018 (14:21 IST)
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಾಲಿವುಡ್‌ನ ಪವರ್ ಕಪಲ್ ಆಗಿದ್ದು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಮೊನ್ನೆಯಷ್ಟೇ ಇಂಗ್ಲೆಂಡ್‌ನಲ್ಲಿ ವಿರಾಟ್ ತಮ್ಮ ಬ್ಯಾಟ್‌ನಿಂದ 23 ನೇ ಟೆಸ್ಟ್ ಶತಕವನ್ನು ಸಿಡಿಸಿ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ನೀಡಿ ತಮ್ಮ ಸಂಭ್ರಮವನ್ನು ಆಚರಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡಿತ್ತು.

ಹೀಗೆ ಉತ್ತಮ ಕಾರಣಗಳಿಗಾಗಿ ಸುದ್ದಿಯಲ್ಲಿರುವ ಇವರು ಕೆಲವೊಮ್ಮೆ ಟ್ರೋಲ್‌ಗೆ ಒಳಗಾಗಿರುವುದೂ ಇದೆ. ಇತ್ತೀಚೆಗಷ್ಟೇ ಬಿಸಿಸಿಐ ಸಮಾರಂಭವೊಂದರಲ್ಲಿ ಅನುಷ್ಕಾ ಭಾರತ ಕ್ರಿಕೆಟ್ ತಂಡದ ಜೊತೆ ನಿಂತು ತೆಗೆದುಕೊಂಡ ಫೋಟೋ ಟ್ರೋಲ್‌ಗೆ ಒಳಗಾಗಿದ್ದನ್ನು ನೆನಪಿಸಿಕೊಳ್ಳಬಹುದು.
ಈಗ ಅನುಷ್ಕಾ ಟ್ರೋಲ್‌ಗೆ ಒಳಗಾಗಿರುವುದು ಸೂಯಿ ಧಾಗಾ ಚಿತ್ರದ ಟ್ರೇಲರ್‌ನಲ್ಲಿನ ಅವರ ಮುಖಭಾವದ ಫೋಟೋಗಳಿಗಾಗಿ. ಅನುಷ್ಕಾ ಸಂತೋಷದಿಂದ ಅಳುತ್ತಿರುವ ಹಾಗೂ ಯೋಚಿಸುತ್ತಾ ಕುಳಿತಿರುವ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ತೀವ್ರವಾಗಿ ಟ್ರೋಲ್‌ಗೆ ಒಳಗಾಗುತ್ತಿದೆ. ಟ್ವಿಟ್ಟರ್ ಹಾಗೂ ಫೇಸ್‌ಬುಕ್ ಬಳಕೆದಾರರು ಫೋಟೋವನ್ನು ಕ್ರಾಪ್ ಮಾಡಿ, ಬೇರೆ ಬೇರೆ ಸನ್ನಿವೇಶಗಳ ಚಿತ್ರಗಳಲ್ಲಿ ಎಡಿಟ್ ಮಾಡಿ, ವಿಚಿತ್ರವಾದ ಶೀರ್ಷಿಕೆಗಳನ್ನು ನೀಡಿ ಟ್ರೋಲ್ ಮಾಡುತ್ತಿದ್ದಾರೆ. 
ಬಸ್‌ನಲ್ಲಿರುವ ಅನುಷ್ಕಾ, ರೈಲಿನಲ್ಲಿರುವ ಅನುಷ್ಕಾ, ವಿದೇಶಿ ಗಣ್ಯರ ಸಭೆಯಲ್ಲಿ ಕುಳಿತಿರುವ ಅನುಷ್ಕಾ, ಕೊಹ್ಲಿ ಮೈದಾನದಲ್ಲಿ ಮಲಗಿದಾಗ ಪಕ್ಕದಲ್ಲಿ ಕುಳಿತಿರುವ ಅನುಷ್ಕಾ, ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮತ್ತು ವಿರಾಟ್ ಸುದ್ದಿಗೋಷ್ಠಿಯಲ್ಲಿ ಅವರ ಮಧ್ಯೆ ಹೀಗೆ ಹಲವು ಕಡೆ ಅನುಷ್ಕಾರನ್ನು ಎಡಿಟ್ ಮಾಡಿ ಚಿತ್ರ ವಿಚಿತ್ರವಾದ ಶೀರ್ಷಿಕೆಗಳನ್ನು ನೀಡಿ ಟ್ರೋಲ್ ಮಾಡುತ್ತಿದ್ದಾರೆ. ಈಗ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾರ ಈ ಚಿತ್ರವನ್ನು ಟ್ರೋಲ್ ಮಾಡುವುದೇ ಟ್ರೆಂಡ್ ಆದಂತೆ ಕಾಣಿಸುತ್ತಿದೆ.
ಸೂಯಿ ಧಾಗಾ ಚಿತ್ರದಲ್ಲಿ ವರುಣ ಧವನ್ ಹಾಗೂ ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರಿಬ್ಬರೂ ಈ ಮೊದಲು ಹಲವು ಚಿತ್ರಗಳಲ್ಲಿ ಗ್ಲಾಮರಸ್ ಪಾತ್ರಗಳನ್ನು ಮಾಡಿದ್ದು ಈ ಚಿತ್ರದಲ್ಲಿ ಒಂದು ಚಿಕ್ಕ ನಗರದ ಡಿಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡ ಸೆಪ್ಟೆಂಬರ್ 28 ರಂದು ಚಿತ್ರವನ್ನು ಬಿಡುಗಡೆ ಮಾಡುವ ಎಲ್ಲಾ ತಯಾರಿಯನ್ನೂ ನಡೆಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments