Webdunia - Bharat's app for daily news and videos

Install App

ಪುತ್ರ ಅಕಾಯ್ ಜನನದ ಬಳಿಕ ಫಸ್ಟ್ ಟೈಂ ಸೋಷಿಯಲ್ ಮೀಡಿಯಾಗೆ ಬಂದ ಅನುಷ್ಕಾ ಶರ್ಮಾ

Krishnaveni K
ಗುರುವಾರ, 28 ಮಾರ್ಚ್ 2024 (15:28 IST)
Photo Courtesy: Anushka Sharma Instagram
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಮಗ ಅಕಾಯ್ ಜನನದ ಬಳಿಕ ಇದೇ ಮೊದಲ ಬಾರಿಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಅನುಷ್ಕಾ ಇನ್ ಸ್ಟಾಗ್ರಾಂ ಆಗಲೀ ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಡೆಲಿವರಿಗಾಗಿ ಪತಿ ಕೊಹ್ಲಿ ಜೊತೆ ಲಂಡನ್ ನಲ್ಲಿಯೇ ನೆಲೆಸಿದ್ದರು. ಹೀಗಾಗಿ ಮಗುವಿನ ಲಾಲನೆ-ಪಾಲನೆಯಲ್ಲಿ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು.

ಆದರೆ ಇದೀಗ ಅಕಾಯ್ ಜನನವಾಗಿ ಒಂದೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ‘ಬೆಳಗಿನ ಸೂರ್ಯನ ಜೊತೆಗೆ ನನ್ನ ಒನ್ ಪ್ಲಸ್ ಓಪನ್ ನಲ್ಲಿ ಓದುವ ಸಮಯ. ದಿನ ಆರಂಭಿಸಲು ಇದಕ್ಕಿಂತ ಸುಂದರ ದಾರಿ ಇದೆಯೇ’ ಎಂದು ಅಡಿಬರಹವೊಂದನ್ನು ಬರೆದಿದ್ದಾರೆ.

ಸದ್ಯಕ್ಕೆ ಅನುಷ್ಕಾ ಮಕ್ಕಳ ಜೊತೆ ಲಂಡನ್ ನಲ್ಲಿಯೇ ಇದ್ದಾರೆ. ವಿರಾಟ್ ಕೊಹ್ಲಿ ಮಾತ್ರ ಐಪಿಎಲ್ ನಲ್ಲಿ ಭಾಗಿಯಾಗಲು ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದರು. ಎರಡು ತಿಂಗಳ ಕಾಲ ಯಾರ ಕೈಗೂ ಸಿಗದ, ಯಾರೂ ಗುರುತು ಸಿಗದ ಜಾಗದಲ್ಲಿ ಕಾಲ ಕಳೆದಿದ್ದಾಗಿ ಕೊಹ್ಲಿ ಇತ್ತೀಚೆಗೆ ಹೇಳಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೈಂಗಿಕ ದೌರ್ಜನ್ಯದ ಆರೋಪಿ ಜತೆ ಸಿನಿಮಾ: ನಟಿ ನಯನತಾರಾ, ವಿಘ್ನೇಶ್‌ಗೆ ಪ್ರಶ್ನೆಗಳ ಸುರಿಮಳೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಹಿಂದೆಂದೂ ನೋಡದ ಲುಕ್‌ನಲ್ಲಿ ಡಾಲಿ ಧನಂಜಯ್‌

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

ಮೈಸೂರಿನಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಡಿಬಾಸ್: ಪತ್ನಿ ಜೊತೆ ಏನು ಲುಕ್ ಗುರೂ..

ಮುಂದಿನ ಸುದ್ದಿ
Show comments