Select Your Language

Notifications

webdunia
webdunia
webdunia
webdunia

ಬಿಕಿನಿಯಲ್ಲಿ ಎಮಿ ಜಾಕ್ಸನ್ ಸೌಂದರ್ಯ ಅನಾವರಣ

ಬಿಕಿನಿಯಲ್ಲಿ ಎಮಿ ಜಾಕ್ಸನ್ ಸೌಂದರ್ಯ ಅನಾವರಣ
Mumbai , ಗುರುವಾರ, 22 ಡಿಸೆಂಬರ್ 2016 (11:58 IST)
ನಟಿ ಎಮಿ ಜಾಕ್ಸನ್‌ಗೆ ದೇಹಕ್ಕೆ ಬಿಕಿನಿ ಹೇಳಿ ಮಾಡಿಸಿದಂತಿರುತ್ತೆ. ಯಾವುದೇ ಕೋನದಲ್ಲಿ ನೋಡಿದರೂ ಅವರು ಪರ್ಫೆಕ್ಟ್. ನೋಟ, ಚರಿಷ್ಮಾ ಇರೋಂತ ಕೆಲವೇ ಕೆಲವು ಬೆಡಗಿಯರಲ್ಲಿ ಎಮಿ ಜಾಕ್ಸನ್ ಸಹ ಒಬ್ಬರು. ಅವರ ಟ್ಟಿಟ್ಟರ್ ಖಾತೆ ಒಮ್ಮೆ ಇಣುಕಿದರೆ ಸಾಕಷ್ಟು ಮಜಬೂತಾದ ಚಿತ್ರಗಳು ಕಣ್ಣಿಗೆ ರಾಚುತ್ತವೆ.
 
ಅದರಲ್ಲೂ ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನಂತೂ ಪಡ್ಡೆಗಳ ಮೈಯಲ್ಲಿ ಕಿಚ್ಚತ್ತಿಸೋ ತರಹ ಇರುತ್ತವೆ. ಇದೀಗ ಅಂತಹದ್ದೇ ಒಂದು ಫೋಟೋವನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 
 
ಗೆಳತಿಯರ ಜೊತೆ ಎಂಜಾಯ್ ಮಾಡುತ್ತಿರುವ ಫೋಟೋ ಅದು. ಎಲ್ಲರೂ ಬಿಕಿನಿಯಲ್ಲಿ ಕಾಣಿಸಿಕೊಂಡು ಕಣ್ಣುಕುಕ್ಕಿದ್ದಾರೆ. ಈ ಚಿತ್ರಕ್ಕೆ ಎಮಿ ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ. "ಕಿಂಬರ್ಲಿ ಲಂಡನ್‍ನಲ್ಲಿ ಈಜುಡುಗೆ ತೊಟ್ಟು ಒಂಚೂರು ಒಳಗೆ ಪರಮಾತ್ಮ ಬಿಟ್ಕೊಂಡ್ರೆ.." ಅನ್ನೋ ಅರ್ಥದಲ್ಲಿ ಬರೆದುಕೊಂಡಿದ್ದಾರೆ. 
 
ಈ ಹಾಟ್ ಬೆಡಗಿಯರು ರಸಿಕರ ಮೈಯಲ್ಲಿ ಬಿಸಿಯೇರಿಸಿದ್ದಾರೆ. ಸದ್ಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ ಅದ್ದೂರಿ ಚಿತ್ರ ’2.0’ದಲ್ಲಿ ಅಭಿನಯಿಸುತ್ತಿದ್ದಾರೆ ಎಮಿ ಜಾಕ್ಸನ್. ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚಿತ್ರವಿದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ನಮ್ಮವರು’ ಚಿತ್ರದ ಬಗ್ಗೆ ಚಿತ್ರತಂಡ ಬಿಚ್ಚಿಟ್ಟ ಘಟನೆಗಳು