ಟ್ವಿಟರ್ ಬಿಡುವ ಬೆದರಿಕೆ ಹಾಕಿದ ಅಮಿತಾಭ್ ಬಚ್ಚನ್! ಕಾರಣವೇನು ಗೊತ್ತಾ?

Webdunia
ಗುರುವಾರ, 1 ಫೆಬ್ರವರಿ 2018 (09:38 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕಳೆದ ಹಲವು ದಿನಗಳಿಂದಲೂ ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ನಿನ್ನೆ ಇದ್ದಕ್ಕಿದ್ದಂತೆ ಟ್ವಿಟರ್ ಸಂಸ್ಥೆ ಮೇಲೆ ಕ್ರುದ್ಧರಾದ ಬಿಗ್ ಬಿ ಸಾಮಾಜಿ ಜಾಲತಾಣದಿಂದ ಹೊರಬರುವ ಬೆದರಿಕೆ ಹಾಕಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣವೇನು ಗೊತ್ತಾ?
 

ಟ್ವಿಟರ್ ನಲ್ಲಿ ಅಮಿತಾಭ್ ಹಿಂಬಾಲಕರ ಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಟ್ವಿಟರ್ ಅವರ 2599 ಹಿಂಬಾಲಕರನ್ನು ಕಿತ್ತು ಹಾಕಿದ್ದಕ್ಕೆ ಬಿಗ್ ಬಿಗೆ ಎಲ್ಲಿಲ್ಲದ ಕೋಪ ಬಂದಿದೆ. ಇದರಿಂದಾಗಿ ಅಮಿತಾಭ್ ಬಾಲಿವುಡ್ ನಟರ ಸಾಲಿನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಟರ ಪೈಕಿ ಎರಡನೇ ಅಂದರೆ ಶಾರುಖ್ ಖಾನ್ ನಂತರದ ಸ್ಥಾನಕ್ಕೆ ಇಳಿದಿದ್ದರು.

ಹೀಗಾಗಿ ಕೋಪದಿಂದಲೇ ಟ್ವೀಟ್ ಮಾಡಿದ ಅಮಿತಾಭ್ ‘ನನ್ನ ಫಾಲೋವರ್ ಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದೀರಾ? ಇದು ಜೋಕ್!! ನಿಮಗೆ ವಿದಾಯ ಹೇಳುವ ಸಮಯ..ಇದುವರೆಗಿನ ಪ್ರಯಾಣಕ್ಕೆ ಧನ್ಯವಾದಗಳು. ಜಗತ್ತಿನಲ್ಲಿ ಮಾಡಲು ಇನ್ನೂ ಆಸಕ್ತಿಕರ ಕೆಲಸಗಳಿವೆ’ ಎಂದು ಬರೆದಕೊಳ್ಳುವುದರ ಜತೆಗೆ ತಮ್ಮ ಸಿನಿಮಾವೊಂದರಲ್ಲಿ ವಿಲನ್ ಪಾತ್ರದಾರಿಯ ಕುತ್ತಿಗೆ ಬಿಗಿ ಹಿಡಿದು ಧಮಕಿ ನೀಡುವ ಫೋಟೋ ಪ್ರಕಟಿಸಿದ್ದಾರೆ.  ಇದಾದ ಬಳಿಕ ಅವರು ಟ್ವಿಟರ್ ನಿಂದ ಹೊರಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಯಾಂಡಲ್‌ವುಡ್‌ ಹಿರಿಯ ನಟ ಉಮೇಶ್‌ಗೆ ಗಂಭೀರ ಕಾಯಿಲೆ: ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

ಫಿಲಿಪ್ಪೀನ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಶೆರಿ ಸಿಂಗ್: ಭಾರತದ ಬ್ಯೂಟಿಗೆ ಮಿಸೆಸ್‌ ಯೂನಿವರ್ಸ್ ಕಿರೀಟ

ಜಾಲಿವುಡ್‌ ಸ್ಟುಡಿಯೋದಲ್ಲಿ ನಡೆದ ಹೈಡ್ರಾಮಾ ಕುರಿತು ಮೌನ ಮುರಿದ ಕಿಚ್ಚ ಸುದೀಪ್‌

ಕಾಂತಾರ ಹಿಟ್ ಆದ ಬೆನ್ನಲ್ಲೇ ಬಿಗ್ ಸುದ್ದಿ ಕೊಟ್ಟ ಹೊಂಬಾಳೆ ಫಿಲಂಸ್: ಅಮಿತಾಭ್ ಜೊತೆ ರಿಷಬ್ ಶೆಟ್ಟಿ

ಕಾಲು ನೋವೆಂದು ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ ಉಮೇಶ್ ಗೆ ಗಂಭೀರ ಖಾಯಿಲೆ

ಮುಂದಿನ ಸುದ್ದಿ
Show comments