ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪಿಂಕ್ ಚಿತ್ರದ ಲೊಗೋ ಶೇರ್ ಮಾಡಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ಮುಂಬರುವ ಚಿತ್ರದ ಲೋಗೋ ಶೇರ್ ಮಾಡಿದ ಅವರು, ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಬಿಗ್ ಬಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಪಿಕು ಚಿತ್ರದ ನಿರ್ಮಾಪಕ ಸೋಯಜಿತ್ ನಿರ್ಮಾಣ ಮಾಡುತ್ತಿದ್ದಾರೆ.
ಅಮಿತಾಬ್ ಬಿಡುಗಡೆ ಮಾಡಿರುವ ಪಿಂಕ್ ಲೋಗೋದಲ್ಲಿ ಎರಡು ಕೈಯಲ್ಲಿ ಐ ಹಾಗೂ ಕೆ ಅಕ್ಷರಗಳನ್ನು ಹಿಡಿದುಕೊಂಡು ಪಿಂಕ್ ಅಂತ ತೋರಿಸಲಾಗಿದೆ. 73 ವರ್ಷದ ಅಮಿತಾಬ್ ಪಿಂಕ್ ಚಿತ್ರದ ಲೋಗೋ ಶೇರ್ ಮಾಡಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಸೋಯಜಿತ್ ಬ್ಯಾನರ್‌ನಲ್ಲಿ ಮೂಡಿ ಬಂದ ಪಿಕು ಚಿತ್ರ ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಇನ್ನೂ ಈ ಚಿತ್ರದಲ್ಲಿ ಬೇಬಿ ಆ್ಯಕ್ಟರ್ ತಪಸ್ಯಾ ಪಾನು ಜತೆಯಾಗಲಿದ್ದಾಳೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಬೆಂಗಾಲಿ ಚಿತ್ರ ನಿರ್ಮಾಪಕ ಅನಿರುದ್ಧ ರಾಯ್ ಚೌಧರಿ
ಪಿಂಕ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮೂವರ ಪಾತ್ರಗಳು ಬಹು ಮುಖ್ಯ ಪಾತ್ರವಹಿಸಲಿವೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ