Select Your Language

Notifications

webdunia
webdunia
webdunia
webdunia

'ಪಿಕು' ಚಿತ್ರಕ್ಕಾಗಿ ದೀಪಿಕಾ ನನಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದರು..ಅಮಿತಾಬ್ ಬಹಿರಂಗ

'ಪಿಕು' ಚಿತ್ರಕ್ಕಾಗಿ ದೀಪಿಕಾ ನನಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದರು..ಅಮಿತಾಬ್ ಬಹಿರಂಗ
ಮುಂಬೈ , ಶುಕ್ರವಾರ, 9 ಸೆಪ್ಟಂಬರ್ 2016 (14:06 IST)
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನಟಿ ದೀಪಿಕಾ ಸಂಭಾವನೆ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. 'ಪಿಕು' ಚಿತ್ರದಲ್ಲಿ ದೀಪಿಕಾ ನನಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದರು ಎಂದು ತಿಳಿಸಿದ್ದಾರೆ. ಮುಂಬರುವ ಚಿತ್ರ 'ಪಿಂಕ್ 'ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿರುವ ವೇಳೆ ಅಮಿತಾಬ್ ಬಚ್ಚನ್ ದೀಪಿಕಾ ಅವರ ಸಂಭಾವನೆ ವಿಚಾರವನ್ನು ಬಿಚ್ಚಿಡುವುದರ ಮೂಲಕ ಎಲ್ಲರಿಗೂ ಶಾಕಿಂಗ್ ನೀಡಿದ್ದಾರೆ. 
'ಪಿಕು' ಚಿತ್ರಕ್ಕಾಗಿ ನನಗಿಂತಲೂ ದೀಪಿಕಾ ಹೆಚ್ಚಾಗಿ ಸಂಭಾವನೆ ಪಡೆದಿದ್ದಾರೆ. ಅಲ್ಲದೇ ಬಿಗ್ ಬಿ ಈ ವೇಳೆ ಎರಡು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 'ನನಗಿಂತಲೂ ಆಕೆ ತುಂಬಾ ಮುಖ್ಯವಾದವರು', ಬಹಳ ದಿನದಿಂದ ನಾನು ಕೆಲಸ ಮಾಡುತಿದ್ದೇನೆ. ಆದ್ದರಿಂದಲೇ ನನ್ನ ಬೆಲೆ ಕಡಿಮೆಯಾಗಿರಬಹುದು ಎಂದು ತಿಳಿಸಿದರು. 
webdunia
ಇತ್ತೀಚೆಗೆ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಮುಂದಿದ್ದಾರೆ. ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ 10 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಹರಿಪ್ರಿಯಾ ನಟನೆಗೆ ಮನಸೋತ ರಸಿಕರು