Select Your Language

Notifications

webdunia
webdunia
webdunia
webdunia

ಹರಿಪ್ರಿಯಾ ನಟನೆಗೆ ಮನಸೋತ ಚಿತ್ರ ರಸಿಕರು

ಹರಿಪ್ರಿಯಾ ನಟನೆಗೆ ಮನಸೋತ ಚಿತ್ರ ರಸಿಕರು
ಬೆಂಗಳೂರು , ಶುಕ್ರವಾರ, 9 ಸೆಪ್ಟಂಬರ್ 2016 (13:16 IST)
'ನೀರ್ ದೋಸೆ' ಬಿಡುಗಡೆಯಾಗಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿದೆ. ಸಿನಿಮಾದಲ್ಲಿ ನಟಿ ಹರಿಪ್ರಿಯಾರ ನಟನೆ ರಸಿಕರು ಮನಸೋಲುವಂತೆ ಮಾಡುತ್ತದೆ. ಚಪ್ಪಾಳೆ ತಟ್ಟುವಂತೆ ಮಾಡುತ್ತದೆ. ಗಾಂಧಿನಗರದಲ್ಲಿ ಹರಿಪ್ರಿಯಾರಂಥ ಯುವ ನಟಿಯರಿಗೆ ಇದು ಅಗತ್ಯವಾದದ್ದು.ಚಿತ್ರದಲ್ಲಿ ಆಕೆಯ ಬೋಲ್ಡ್ ನೆಸ್ ಎಂಥವರನ್ನು ನಾಚಿಸಿ ಬಿಡುವಂಥದ್ದು, ಹರಿಪ್ರಿಯಾ ಧರಿಸಿದ ಬಟ್ಟೆ, ಮಾತು ಹಾಗೂ ಹರಿಪ್ರಿಯಾರ ಸ್ಟೈಲ್ ಎಲ್ಲವು ಚಿತ್ರರಸಿಕರನ್ನು ತನ್ನತ್ತ ಸೆಳೆಯುತ್ತದೆ. 

 
ಹರಿಪ್ರಿಯಾ ನಟನೆಗೆ ಫಿದಾ ಆಗಿರೋ ಅದೆಷ್ಟೋ ಸಿನಿ ರಸಿಕರು ಜಗ್ಗೇಶ್ ಅವರಿಗೆ ಕಾಲ್ ಮಾಡಿ ಹರಿಪ್ರಿಯಾ ನಂಬರ್ ಕೇಳುತ್ತಿದ್ದಾರಂತೆ. ಹೀಗಂತ ಜಗ್ಗಶ್ ಅವರೇ ಖುದ್ದು ತಿಳಿಸಿದ್ದಾರೆ. 
 
ಒಬ್ಬ ನಟಿಯೂ ಕಾಲ್ ಗರ್ಲ್ ಪಾತ್ರ ಮಾಡೋದು ಸುಲಭದ ಮಾತಲ್ಲ. ಸಾಕಷ್ಟು ಅನುಭವಿಸಬೇಕಾಗುತ್ತದೆ. ಪ್ರೇಕ್ಷಕರಿಂದ ಪಾತ್ರಕ್ಕೆ ಮೆಚ್ಚುಗೆ ಸಿಗೋದು ಸುಲಭದ ಮಾತಲ್ಲ ಎನ್ನುತ್ತಾರೆ ಜಗ್ಗೇಶ್. 
 
ಪಾತ್ರಕ್ಕಾಗಿ ನಟಿ ಹರಿಪ್ರಿಯಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಕೆ ಹಲವು ಮುಜುಗರಗಳನ್ನು ಎದುರಿಸಿದವಳು. ಶೂಟಿಂಗ್ ನಡೆಯುವಾಗ ಎಲ್ಲಾ ಲೈಡ್ ಹುಡುಗರ ಆಕೆಯ ಕಡೆಗೆ ನೋಡುತ್ತಿದ್ದರು, ಆ ತರಹ ಬಟ್ಟೆ ಹಾಕಿಕೊಂಡು ಅಲ್ಲಿ ನಿಲ್ಲುವುದು ಜೋಕ್ ಅಲ್ಲ. ಬಹಳ ಮುಜುಗರದ ವಿಷಯ. ಇಂತಹ ಪಾತ್ರ ಮಾಡೋಕೆ ಧೈರ್ಯ ಬೇಕು ಎಂದು ನಟ ಜಗ್ಗೇಶ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಜೀವನದಿ ಕಾವೇರಿ ಹೋರಾಟದಲ್ಲಿ ಕಾಣಿಸಿಕೊಳ್ಳದ 'ಗೌರಮ್ಮ'