ಅಯೋಧ್ಯೆ ರಾಮನಿಗೆ ಭಾರೀ ಉಡುಗೊರೆ ನೀಡಿದ ಅಮಿತಾಭ್ ಬಚ್ಚನ್

Krishnaveni K
ಶನಿವಾರ, 10 ಫೆಬ್ರವರಿ 2024 (12:44 IST)
Photo Courtesy: Twitter
ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಎರಡನೇ ಬಾರಿಗೆ ಭೇಟಿ ನೀಡಿದ್ದಾರೆ.

ಅಮಿತಾಭ್ ಬಚ್ಚನ್ ಅಯೋಧ‍್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೂ ವಿಶೇಷ ಆಹ್ವಾನ ಹಿನ್ನಲೆಯಲ್ಲಿ ಭಾಗಿಯಾಗಿದ್ದರು. ಇದೀಗ ಎರಡನೇ ಬಾರಿಗೆ ಅಮಿತಾಭ್ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಭೇಟಿ ಜೊತೆಗೆ ರಾಮನಿಗೆ ವಿಶೇಷ ಆಭರಣದ ಉಡುಗೊರೆಯನ್ನೂ ನೀಡಿದ್ದಾರೆ.

ರಾಮನಿಗೆ ಭಾರೀ ಗಾತ್ರದ ಚಿನ್ನದ ಮಾಲೆ ಉಡುಗೊರೆ
ಜ್ಯುವೆಲ್ಲರಿ ಶಾಪ್ ಒಂದರ ಉದ್ಘಾಟನೆಗಾಗಿ ಅಮಿತಾಭ್ ಬಚ್ಚನ್ ಅಯೋಧ್ಯೆಗೆ ಬಂದಿದ್ದರು. ಈ ವೇಳೆ ರಾಮಮಂದಿರಕ್ಕೂ ಭೇಟಿ ನೀಡಿದ್ದಾರೆ. ವಿಶೇಷವೆಂದರೆ ರಾಮ ಲಲ್ಲಾನನ್ನು ನೋಡಲು ಬರುವಾಗ ಭಾರೀ ಗಾತ್ರದ ಆಭರಣವೊಂದನ್ನೂ ತಂದಿದ್ದಾರೆ. ಕೆಲವು ಹೊತ್ತು ರಾಮನ ಮುಂದೆ ನಿಂತು ಪ್ರಾರ್ಥನೆ ನಡೆಸಿದ ಅಮಿತಾಭ್ ಅಲ್ಲಿಯೇ ಉಡುಗೊರೆ ಹಸ್ತಾಂತರಿಸಿದ್ದಾರೆ. ಬಳಿಕ ಅಯೋಧ್ಯೆಯಲ್ಲಿಯೇ ಊಟ ಮುಗಿಸಿ ತೆರಳಿದ್ದಾರೆ. ಈ  ವೇಳೆ ಅವರಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೂ ಕೆಲವೇ ದಿನ ಮೊದಲು ಅಮಿತಾಭ್ ಇಲ್ಲಿ ನಿವೇಶನವೊಂದನ್ನು ಖರೀದಿ ಮಾಡಿದ್ದರು. ಬಳಿಕ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲೂ ಇತರೆ ಗಣ್ಯರೊಂದಿಗೆ ಪಾಲ್ಗೊಂಡು ಕಾರ್ಯಕ್ರಮ ಮುಗಿಯುವವರೆಗೂ ಅಲ್ಲಿಯೇ ಇದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ನಿರ್ದೇಶಕ ರಾಜ್ ನಿಡಮೋರು ಜೊತೆ ಸದ್ದಿಲ್ಲದೇ ಮದುವೆಯಾದ ಸಮಂತಾ

ಮುಂದಿನ ಸುದ್ದಿ
Show comments