ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ವಿಚ್ಛೇದನದ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಮಾತು

Krishnaveni K
ಶುಕ್ರವಾರ, 22 ನವೆಂಬರ್ 2024 (11:16 IST)
ಮುಂಬೈ: ಅಭಿಷೇಕ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಇದೇ ಮೊದಲ ಬಾರಿಗೆ ಅಮಿತಾಭ್ ಬಚ್ಚನ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ ವದಂತಿಗಳ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಅಮಿತಾಭ್ ಬಚ್ಚನ್ ಬ್ಲಾಗ್ ನಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ತಮ್ಮ ಮಗ ಮತ್ತು ಸೊಸೆ ಬಗ್ಗೆ ಹರಡುತ್ತಿರುವ ವಿಚ್ಛೇದನ ವದಂತಿಗಳ ಬಗ್ಗೆ ಮಾತನಾಡಿದ್ದಾರೆ. ಇದು ಮೊದಲನೇ ಬಾರಿಗೆ ಅಮಿತಾಭ್ ಮಗ-ಸೊಸೆ ಜೀವನದ ಬಗ್ಗೆ ಮಾತನಾಡಿದ್ದಾರೆ.

‘ಈ ರೀತಿಯ ಸುದ್ದಿಗಳಿಂದ ಕೆಲವರಿಗೆ ಲಾಭವಾಗಬಹುದು. ಆದರೆ ನನ್ನ ಗಮನ ಕುಟುಂಬದ ಮೇಲಿರುತ್ತದೆ. ಐಶ್ವರ್ಯಾ ಹಾಗೂ ಅಭಿಷೇಕ್ ಸಂಸಾರದಲ್ಲಿ ಸಮಸ್ಯೆಗಳಿವೆಯೇ ಎಂದು ಪ್ರಶ್ನಾರ್ಥಕ ಚಿಹ್ನೆಯಲ್ಲಿ ಬರೆಯಲಾಗುತ್ತದೆ. ಅಂದರೆ ಬರೆಯುವವರಿಗೆ ಅದು ಪ್ರಶ್ನಾರ್ಥಕವಾಗಿದೆ. ಕೆಲವೊಂದು ಊಹಾಪೋಹಗಳು ಊಹಾಪೋಹಗಳೇ. ನಾನು ನನ್ನ ಕುಟುಂಬದ ಬಗ್ಗೆ ಮಾತನಾಡುವುದು ಕಡಿಮೆ. ಯಾಕೆಂದರೆ ಅದು ನನ್ನ ಖಾಸಗಿ ವಿಚಾರ’ ಎಂದು ಅಮಿತಾಭ್ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಮೊಮ್ಮಗಳು ಆರಾಧ್ಯ ಹುಟ್ಟುಹಬ್ಬವಿತ್ತು. ಆಗಲೂ ಬಚ್ಚನ್ ಕುಟುಂಬದಿಂದ ಯಾರೂ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿಕೊಂಡಿರಲಿಲ್ಲ. ಬರ್ತ್ ಡೇ ಸೆಲೆಬ್ರೇಷ್ ನಲ್ಲೂ ಭಾಗಿಯಾಗಿರಲಿಲ್ಲ. ಹೀಗಾಗಿ ಮತ್ತೆ ಇಬ್ಬರ ಸಂಬಂಧದ ನಡುವೆ ಅನುಮಾನಗಳು ಸೃಷ್ಟಿಯಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ದರ್ಶನ್ ಫ್ಯಾನ್ಸ್ ನಿಂದ ನ್ಯಾಯಾಧೀಶರೇ ಗರಂ: ಮಹತ್ವದ ತೀರ್ಮಾನಕ್ಕೆ ಸಿದ್ಧತೆ video

ಮುಂದಿನ ಸುದ್ದಿ
Show comments