ಅಲಿಯಾ ಭಟ್ ಖಾಸಗಿ ಫೋಟೋ ವೈರಲ್: ದೂರು ನೀಡಿದ ನಟಿ, ಅನುಷ್ಕಾ ಶರ್ಮಾ ಬೆಂಬಲ

Webdunia
ಬುಧವಾರ, 22 ಫೆಬ್ರವರಿ 2023 (09:06 IST)
Photo Courtesy: Twitter
ಮುಂಬೈ: ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಆದರೆ ಇದು ಕೆಲವೊಮ್ಮೆ ಎಲ್ಲೆ ಮೀರುತ್ತದೆ. ಇದೇ ಕಾರಣಕ್ಕೆ ಈಗ ಬಾಲಿವುಡ್ ನಟಿ ಅಲಿಯಾ ಭಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತಮಗಾದ ಕಹಿ ಅನುಭವವನ್ನು ಅಲಿಯಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮನೆಯ ಲಿವಿಂಗ್ ರೂಂನಲ್ಲಿ ಕಾಲ ಕಳೆಯುತ್ತಿದ್ದಾಗ ಎದುರು ಬಿಲ್ಡಿಂಗ್ ನ ಟೆರೇಸ್ ಮೇಲಿಂದ ಇಬ್ಬರು ತಮ್ಮ ಮೇಲೆ ಕ್ಯಾಮರಾ ಕೇಂದ್ರೀಕರಿಸಿಕೊಂಡು ಇಟ್ಟಿದ್ದರು.

ನಾನು ನಾರ್ಮಲ್ ಆಗಿ ನನ್ನ ವೈಯಕ್ತಿಕ ಸಮಯ ಕಳೆಯುತ್ತಿದ್ದೆ. ಆದರೆ ಇಬ್ಬರು ನನ್ನ ಮೇಲೆ ಕ್ಯಾಮರಾ ಕಣ್ಣಿರಿಸಿರುವುದು ನೋಡಿ ನಿಜಕ್ಕೂ ಶಾಕ್ ಆಗಿತ್ತು. ಇಂತಹ ಕೆಲಸ ಮಾಡಲು ನಾಚಿಕೆಯಾಗಬೇಕು. ಇದು ನಮ್ಮ ಖಾಸಗಿತನಕ್ಕೆ ತಂದ ಧಕ್ಕೆ. ಇದು ಯಾವ ರೀತಿಯಲ್ಲೂ ಒಪ್ಪುವಂತದ್ದಲ್ಲ’ ಎಂದು ಕದ್ದು ಫೋಟೋ ತೆಗೆದ ಕ್ಯಾಮರಾ ಮ್ಯಾನ್ ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲ, ಅಲಿಯಾ ಈಗ ಈ ವಿಚಾರವನ್ನು ಮುಂಬೈ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಇದಕ್ಕೆ ನಟಿ ಅನುಷ್ಕಾ ಶರ್ಮಾ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ನಮಗೂ ಈ ರೀತಿ ಅನೇಕ ಬಾರಿ ಆಗಿದೆ. ಇದೇ ಫೋಟೋಗ್ರಾಫರ್ ಗಳು ನಮ್ಮ ಪ್ರೈವೆಸಿಗೂ ಧಕ್ಕೆ ತಂದಿದ್ದರು. ಎಷ್ಟೇ ಹೇಳಿದರೂ ಇವರು ನಮ್ಮ ಮಗಳ ಫೋಟೋವನ್ನು ಕದ್ದು ತೆಗೆದು ಬಹಿರಂಗಪಡಿಸುತ್ತಾರೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಧರ್ಮೇಂದ್ರ ಸಾವಿನ ವದಂತಿ ಬೆನ್ನಲ್ಲೇ ಮಗಳಿಂದ ಸ್ಪಷ್ಟನೆ

ಇದೊಂದು ಭಯಾನಕ ಘಟನೆ: ದೆಹಲಿ ಸ್ಫೋಟಕ್ಕೆ ಅಲ್ಲು ಅರ್ಜುನ್ ಸಂತಾಪ

ದರ್ಶನ್ ಜೈಲಿನಲ್ಲಿ, ಬರ್ತಡೇ ದಿನ ವಿಜಯಲಕ್ಷ್ಮಿ ಏನ್‌ ಮಾಡಿದ್ರೂ ಗೊತ್ತಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಮುಂದಿನ ಸುದ್ದಿ
Show comments