Publish Date: Wed, 21 Jun 2017 (12:09 IST)
Updated Date: Wed, 21 Jun 2017 (12:12 IST)
ನವದೆಹಲಿ: ಬಾಲಿವುಡ್ ನಟರ ಪೈಕಿ ಅಕ್ಷಯ್ ಕುಮಾರ್ ಹಲವು ಕಾರಣಗಳಿಗೆ ವಿಶೇಷವೆನಿಸುತ್ತಾರೆ. ಅವರ ಸಾಮಾಜಿಕ ಸುಧಾರಣಾ ಸಿನಿಮಾಗಳು ಮತ್ತು ಕೆಲಸಗಳು ಜನ ಸಾಮಾನ್ಯರಿಗೂ ಇಷ್ಟವಾಗುತ್ತದೆ.
ಹೀಗಿರುವಾಗ ಅಕ್ಕಿ ಪ್ರಧಾನಿ ಮೋದಿಯಾಗಿ ಬದಲಾಗಲಿದ್ದಾರಂತೆ! ಅಂದರೆ ಸಿನಿಮಾವೊಂದರಲ್ಲಿ ಅಕ್ಷಯ್ ಪ್ರಧಾನಿ ಮೋದಿ ಪಾತ್ರ ಮಾಡಲಿದ್ದಾರೆ. ಇತ್ತೀಚೆಗೆ ಸ್ವತಃ ಪ್ರಧಾನಿ ಮೋದಿ ಅಕ್ಷಯ್ ಅಭಿನಯದ ಟಾಯ್ಲೆಟ್: ಏಕ್ ಪ್ರೇಮ್ ಕಥಾ ಸಿನಿಮಾದ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದನ್ನು ಸ್ಮರಿಸಬಹುದು.
ಇದೀಗ ಸಿನಿಮಾವೊಂದರಲ್ಲಿ ಅಕ್ಷಯ್ ರನ್ನೇ ಪ್ರಧಾನಿ ಮೋದಿ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ಮೊದಲು ಈ ಪಾತ್ರವನ್ನು ಅನುಪಮ್ ಖೇರ್ ಅಥವಾ ಪರೇಶ್ ರಾವಲ್ ಮಾಡುವುದೆಂದಿತ್ತಂತೆ. ಇದೀಗ ಅಕ್ಷಯ್ ಕುಮಾರ್ ಜನಪ್ರಿಯತೆಯನ್ನು ಪರಿಗಣಿಸಿ ಆಯ್ಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ