Publish Date: Sat, 22 Oct 2016 (08:49 IST)
Updated Date: Sat, 22 Oct 2016 (08:55 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ತಮ್ಮ ಹೊಸ ಸಿನಿಮಾದಲ್ಲಿ ಸ್ವಾತಂತ್ರ್ಯ ನಂತರ ಭಾರತ ಪಡೆದ ಮೊದಲ ಒಲಿಂಪಿಕ್ಸ್ ಪದಕದ ಬಗ್ಗೆ ಹೇಳಲಿದ್ದಾರಂತೆ.
ಈ ಚಿತ್ರಕ್ಕೆ “ಗೋಲ್ಡ್” ಎಂದು ಹೆಸರಿಡಲಾಗಿದೆ.1948 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಬಂದಿತ್ತು. ಇದರ ಹಿನ್ನೆಲೆಯಲ್ಲಿ ನಡೆಯಲಿರುವ ಸಿನಿಮಾ ಇದಾಗಿದ್ದು, ಮುಂದಿನ ವರ್ಷ ಸ್ವಾತಂತ್ರ್ಯ ದಿನ ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಅಕ್ಷಯ್ ಕುಮಾರ್ ರುಸ್ತುಂ, ಏರ್ ಲಿಫ್ಟ್ ನಂತಹ ದೇಶ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಸಾಲಿಗೆ ಈ ಚಿತ್ರವೂ ಸೇರ್ಪಡೆಯಾಗಲಿದೆ. ರೀಮಾ ಕಗ್ತಿ ಚಿತ್ರದ ನಿರ್ದೇಶಕರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ