Select Your Language

Notifications

webdunia
webdunia
webdunia
webdunia

ನೂರು ಕೋಟಿ ಕಲೆಕ್ಷನ್ ಮಾಡಿದ ಅಕ್ಷಯ್ ಏಳನೇ ಚಿತ್ರ

ನೂರು ಕೋಟಿ ಕಲೆಕ್ಷನ್ ಮಾಡಿದ ಅಕ್ಷಯ್ ಏಳನೇ ಚಿತ್ರ
Mumbai , ಮಂಗಳವಾರ, 21 ಫೆಬ್ರವರಿ 2017 (16:22 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವ ಜಾಲಿ ಎಲ್ಎಲ್‌ಬಿ 2 ಚಿತ್ರ ಬಾಕ್ಸ್ ಆಫೀಸಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ ಎಂದೂ, ಅಕ್ಷಯ್ ಚಿತ್ರಗಳಲ್ಲಿ ರೂ.100 ಕೋಟಿ ತಂದುಕೊಟ್ಟ 7ನೇ ಚಿತ್ರ ಇದು ಎಂದು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
 
ಈ ಹಿಂದೆ ಅಕ್ಷಯ್ ಅಭಿನಯದ ರೌಡಿ ರಾಥೋಡ್, ಏರ್‌ಲಿಫ್ಟ್, ರುಸ್ತುಂ, ಹೌಸ್‌ಫುಲ್ 2, ಹಾಲಿಡೇ, ಹೌಸ್‌ಫುಲ್ 3 ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ. ಇದನ್ನು ಪಕ್ಕಕ್ಕೆ ಇಟ್ಟರೆ..ಫೆಬ್ರವರಿ 10ರಂದು ಪ್ರೇಕ್ಷಕರ ಮುಂದೆ ಬಂದ ಜಾಲಿ ಎಲ್ಎಲ್‌ಬಿ 2 ಚಿತ್ರ ದೇಶದಾದ್ಯಂತ ಫೆ.20ಕ್ಕೆ ಒಟ್ಟು ರೂ.97.92 ಕೋಟಿ ವಸೂಲಿ ಮಾಡಿದೆ.
 
ಎರಡನೇ ವಾರಾಂತ್ಯದಲ್ಲಿ ಶುಕ್ರವಾರ ರೂ.4.14 ಕೋಟಿ, ಶನಿವಾರ ರೂ.6.35 ಕೋಟಿ, ಭಾನುವಾರ ರೂ.7.24 ಕೋಟಿ, ಸೋಮವಾರ ರೂ.2.48 ಕೋಟಿ ಮಾಡಿದ್ದು, ಒಟ್ಟು ರೂ.97.92 ಕೋಟಿ ವಸೂಲಿ ಮಾಡಿದೆ ಎಂದು ತರಣ್ ಆದರ್ಶ್ ಟ್ವಿಟ್ಟರ್‌ನಲ್ಲಿ ವಿವರ ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆ ಸಿನಿಮಾಗೆ ಬರೋಬ್ಬರಿ 40 ನಿಮಿಷಗಳಷ್ಟು ಕಟ್