ಕ್ಯಾಮಿಡಿ ಮೂವೀ ಗೋಲ್ಮಾಲ್ 4 ಚಿತ್ರದಲ್ಲಿ ರೋಹಿತ್ ಶೆಟ್ಟಿ ಜತೆಗೆ ಅಜಯ್ ದೇವಗನ್ ಕೆಲಸ ಮಾಡಲಿದ್ದಾರೆ ಎಂದು ಮೂಲಗಲಿಂದ ತಿಳಿದು ಬಂದಿದೆ. ಮೂಲಗಳ ಪ್ರಕಾರ ಸೂಪರ್ ಸ್ಟಾರ್ ಅಜಯ್ ದೇವಗನ್ ರೋಹಿತ್ ಶೆಟ್ಟಿ ಕಾಮಿಡಿ ಮೂವೀಯಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆದ್ರೆ ಈ ಹಿಂದೆ ಇಬ್ಬರ ಮಧ್ಯೆ ವಿರಸವಾಗಿತ್ತು. ಆದ್ರೆ ಇದೀಗ ಇವೆಲ್ಲವೂ ತಣ್ಣಗಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಪಬ್ಲಿಕ್ ಎದುರು ಇಬ್ಬರು ಯಾವುದೇ ಸ್ಟೇಟಮೆಂಟ್ ನೀಡಿರಲಿಲ್ಲ. ಇನ್ನೂ ಶೀಘ್ರದಲ್ಲೇ ರೋಹಿತ್ ಗೋಲ್ಮಾಲ್ -4 ಚಿತ್ರವನ್ನು ತೆರೆ ಮೇಲೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಚಿತ್ರದ ಬಗ್ಗೆ ಮಾತುಕತೆ ನಡೆಸಲು ಅಜಯ್ ದೇವಗನ್ ಅವರನ್ನು ನಿರ್ದೇಶಕ ರೋಹಿತ್ ಶೆಟ್ಟಿ ಭೇಟಿ ಮಾಡಲಿದ್ದಾರಂತೆ. ಇತ್ತ ಶಿವಯ್ಯ ಚಿತ್ರದ ಶೂಟಿಂಗ್‌ನಲ್ಲಿ ಅಜಯ್ ದೇವಗನ್ ಬ್ಯೂಸಿ ಇದ್ದಾರೆ. ಅಲ್ಲದೇ ಅಜಯ್ ದೇವಗನ್ ತಮ್ಮ ಬಂಗ್ಲೆಗೆ ಬರುವಂತೆ ರೋಹಿತ್‌ಗೆ ಹೇಳಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ