Select Your Language

Notifications

webdunia
webdunia
webdunia
webdunia

ಮಲೆಯಾಳಂ ಚಿತ್ರದಲ್ಲಿ ಐಶ್ವರ್ಯ ರಾಜೇಶ್ ಅಭಿನಯ

Aishwarya Rajesh
ಮುಂಬೈ , ಗುರುವಾರ, 2 ಜೂನ್ 2016 (18:51 IST)
ನ್ಯಾಷನಲ್ ಅವಾರ್ಡ್ ಪ್ರಶಸ್ತಿ ಗಿಟ್ಟಿಸಿಕೊಂಡ ಕಾಕಾ ಮುತೈ ಚಿತ್ರದಲ್ಲಿ ಐಶ್ವರ್ಯ ರಾಜೇಶ್ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅರ್ಜುನ್ ರಾಮ್ ಪಾಲ್ ಜತೆಗೆ ಡ್ಯಾಡಿ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯ ಇದೀಗ ಮಲೆಯಾಳಂ ಚಿತ್ರರಂಗಕ್ಕೆ ಹಾರಿದ್ದಾರೆ. 

ನವೀನ್ ಪೌಲಿ ಜತೆ ಮಲೆಯಾಳಂ ಚಿತ್ರದಲ್ಲಿ ಐಶ್ವರ್ಯ ಕಾಣಿಸಿಕೊಳ್ಳುತ್ತಿದ್ದಾಳೆ.'ನಾನು ಮಲೆಯಾಳಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವುದರ ಬಗ್ಗೆ ಆಸಕ್ತಿ ಇತ್ತು, ಕೆಲ ದಿನಗಳ ದಿಂದೆ ಇದಕ್ಕಾಗಿ ಆಫರ್‌ಗಳು ಬರುತ್ತಿದ್ದವು'.

ಆದರೆ 'ಬೇರೆ ಚಿತ್ರದಲ್ಲಿ ಬ್ಯೂಸಿಯಾಗಿದ್ದ ಕಾರಣ ಕೆಲ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ನನಗೆ ಉತ್ತಮ ಸ್ಕ್ರಿಪ್ಟ್ ಹಾಗೂ ಕಥೆ ಒಳಗೊಂಡಿರುವ ಚಿತ್ರಗಳಲ್ಲಿ ಆಫರ್ ಬಂದಿದೆ. ಅದಕ್ಕಾಗಿ ಮಲೆಯಾಳಂ ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದೇನೆ'ಎಂದು ಐಶ್ವರ್ಯ ತಿಳಿಸಿದ್ದಾರೆ.
 
ಸಿದ್ದಾರ್ಥ ಸಿಲ್ವಾ ಅವರ ಪ್ರೋಜೆಕ್ಟ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ನವೀನ್ ಐಶ್ವರ್ಯ ನಟಿಸುತ್ತಿದ್ದಾರೆ. ಅಪರ್ಣಾ ಮೋಹನ್, ಶ್ರಿನಿವಾಸನ್, ಸೂರಜ್ ವೆನಿಜರಮೋಡು, ಮನಿಯನ್‌ಪಿಲ್ಯಾ ರಾಜು ಮುಂತಾದವರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವರುಣ್ ಧವನ್ ಜತೆ ನಟಿಸಿದ್ದು ಅದ್ಭುತವಾಗಿತ್ತು- ನಟ ಜಾನ್ ಅಬ್ರಾಹಂ