Publish Date: Mon, 22 May 2017 (09:52 IST)
Updated Date: Mon, 22 May 2017 (09:56 IST)
ಮುಂಬೈ: ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್ ಸಿನಿಮಾದಲ್ಲಿ ಹಲವು ದಾಖಲೆ ಮಾಡಿದ್ದಾರೆ. ಅವರಿಗೆ ಎಷ್ಟೋ ಮಂದಿ ಆರಾಧಕರಿದ್ದಾರೆ. ಆದರೂ ಅವರು ಅಭಿಮಾನಿಗಳ ಬಳಿಗೆ ಬಂದ ಉದಾಹರಣೆಯಿಲ್ಲ.
ಆದರೆ ಇದೀಗ ಐಶ್ವರ್ಯಾ ಇಂತಹದ್ದೊಂದು ಕೆಲಸ ಮಾಡಲು ಹೊರಟಿದ್ದಾರೆ. ಅಂದರೆ, ಸಾಮಾಜಿಕ ಜಾಲತಾಣ ಖಾತೆ ತೆರೆಯಲಿದ್ದಾರಂತೆ. ಅವರ ಪತಿ ಅಭಿಷೇಕ್ ಬಚ್ಚನ್, ಮಾವ ಅಮಿತಾಭ್ ಬಚ್ಚನ್ ಸೇರಿದಂತೆ ಕುಟುಂಬದವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.
ಅವರ ಜತೆಗೆ ಐಶ್ ಗೂ ಸೇರುವ ಮನಸ್ಸಾಗಿದೆ. ಎಲ್ಲರೂ ಕೇಳ್ತಿದ್ದಾರೆ ಯಾವಾಗ ಸೋಷಿಯಲ್ ಮೀಡಿಯಾ ಖಾತೆ ತೆರೆಯುವುದು ಅಂತ. ಬಹುಶಃ ಈಗ ಸರಿಯಾದ ಸಮಯ ಬಂದಿದೆ ಎಂದು ಐಶ್ ಹೇಳಿದ್ದಾರೆ. ಇದರಿಂದ ಶೀಘ್ರದಲ್ಲೇ ಐಶ್ ಅಭಿಮಾನಿಗಳಿಗೆ ಹತ್ತಿರವಾಗಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ