Select Your Language

Notifications

webdunia
webdunia
webdunia
webdunia

ಅತ್ಯುತ್ತಮ ನಟಿಯಾಗಿ ಐಶ್ವರ್ಯಾ ರೈ ಬಚ್ಚನ್

ಅತ್ಯುತ್ತಮ ನಟಿಯಾಗಿ ಐಶ್ವರ್ಯಾ ರೈ ಬಚ್ಚನ್
Mumbai , ಸೋಮವಾರ, 6 ಮಾರ್ಚ್ 2017 (21:54 IST)
ಇಂಟರ್‌ನ್ಯಾಶನಲ್ ಫಿಲಂ ಫೆಸ್ಟಿವಲ್ ಮತ್ತು ಅವಾರ್ಡ್ಸ್ ಆಫ್ ಆಸ್ಟ್ರೇಲಿಯಾ (ಐಎಫ್ಎಫ್ಎಎ)ದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ’ಸರಬ್‌ಜಿತ್’ ಚಿತ್ರದಲ್ಲಿನ ದಲ್ಬೀರ್ ಕೌರ್ ಪಾತ್ರಕ್ಕಾಗಿ ಈ ಪ್ರಶಸ್ತಿ ಸಿಕ್ಕಿದೆ.
 
ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವಿಟ್ಟರ್ ಮೂಲಕ ಈ ವಿಷಯವನ್ನು ಪ್ರಕಟಿಸಿದ್ದಾರೆ. ಚಿತ್ರತಂಡಕ್ಕೆ ಶುಭಾಶಯ ಹೇಳಿದ್ದಾರೆ. ಕಳೆದ ವರ್ಷ ಮೇ 20ರಂದು ಬಿಡುಗಡೆಯಾದ ’ಸರಬ್‌ಜಿತ್’ ಚಿತ್ರ ಪ್ರೇಕ್ಷಕರ ಜತಗೆ ಪ್ರಮುಖರ ಮೆಚ್ಚುಗೆಗೆ ಪಾತ್ರವಾಗಿತ್ತು. 
 
ಪಾಕಿಸ್ತಾನ ಜೈಲಿನಲ್ಲಿ ನರಕಯಾತನೆ ಅನುಭವಿಸಿದ ಸರಬ್‌ಜಿತ್ ಸಿಂಗ್ ಜೀವನ ಕಥೆಯಾಧಾರವಾಗಿ ನಿರ್ದೇಶಕ ಒಮಂಗ್ ಕುಮಾರ್ ಚಿತ್ರವನ್ನು ತೆರೆಗೆ ತಂದಿದ್ದರು. ತನ್ನ ಸೋದರನಿಗಾಗಿ ಎರಡು ದಶಕಗಳ ಕಾಲ ಹೋರಾಟ ಮಾಡಿದ ಮಹಿಳೆಯಾಗಿ ಐಶ್ವರ್ಯಾ ರೈ ಕಾಣಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್-ದೀಪಿಕಾ ಪಡುಕೋಣೆ ಬ್ರೇಕಪ್ ನಿಜವೇ?