Select Your Language

Notifications

webdunia
webdunia
webdunia
webdunia

ಐಶ್-ಅಭಿಷೇಕ್ ಮಧ್ಯೆ ಮನಸ್ತಾಪ.. ನಾವಿಬ್ಬರು ಚೆನ್ನಾಗಿದ್ದೀವಿ ಎಂದ ದಂಪತಿ

ಐಶ್-ಅಭಿಷೇಕ್ ಮಧ್ಯೆ ಮನಸ್ತಾಪ.. ನಾವಿಬ್ಬರು ಚೆನ್ನಾಗಿದ್ದೀವಿ ಎಂದ ದಂಪತಿ
ಮುಂಬೈ , ಸೋಮವಾರ, 23 ಮೇ 2016 (14:26 IST)
ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಮಧ್ಯೆ ಮನಸ್ತಾಪವಾಗಿದೆ ಎಂದು ರೂಮರ್ಸ್ ಹರಡಿತ್ತು. ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ಹೇಳಲಾಗ್ತಿತ್ತು. ಇದರ ಮಧ್ಯೆ ಇಂದು ಅಭಿಷೇಕ್ ನಾವಿಬ್ಬರು ಚೆನ್ನಾಗಿದ್ದೀವಿ, ನಮ್ಮಿಬ್ಬರ ಮದ್ಯೆ ಯಾವುದೇ ಮನಸ್ತಾಪವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತಾರಾ ದಂಪತಿಗಳು ರೋಮ್ಯಾಂಟಿಕ್ ಆಗಿ ಲಾಂಗ್ ಡ್ರೈವ್‌ಗೆ ತೆರಳಿದ್ದು ಕಂಡು ಬಂತು.


ಕಾರಿನಲ್ಲಿ ಇಬ್ಬರು ಲಾಂಗ್ ಡ್ರೈವ್‌ಗೆ ತೆರಳಿದ್ದಾರೆ. ಈ ವೇಳೆ ಕ್ಯಾಮರಾ ನೋಡಿದ ಅಭಿಷೇಕ, 'ನಮಸ್ಕಾರ' ಎಂದು ಪೋಸ್ ಕೊಟ್ಟು ಐಶ್ವರ್ಯ ಜತೆಗೆ ಹೋಗುತ್ತಿರುವ ದೃಶ್ಯವನ್ನು ಇಲ್ಲಿ ಕಾಣಬಹುದು.
 
ಮೂರು ದಿನಗಳ ಹಿಂದೆ ಐಶ್ ಬಹುನಿರೀಕ್ಷಿತ ಚಿತ್ರ ಸರಬ್ಜಿತ್ ಚಿತ್ರದ ಪ್ರಚಾರ ಸಮಾರಂಭದಲ್ಲಿ ತೊಡಗಿದ್ದರು.. ಈ ವೇಳೆ ಅಭಿಷೇಕ್ ಮತ್ತು ಐಶ್ ಕುಟುಂಬದ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. ಆಗ ವೇದಿಕೆ ಮೇಲೆ ಮುಖ ಸಿಂಡರಿಸಿಕೊಂಡಿದ್ದ ಅಭಿಷೇಕ್, ಐಶ್ ಜತೆ ಸರಿಯಾಗಿ ನಿಲ್ಲಲು ಹಿಂದೇಟು ಹಾಕಿದ್ದರು. 
 
ನೀನೇ ನಿಂತಕೋ ಎಂದು ಐಶ್‌ಗೆ ಹೇಳಿ ಮುಂದೆ ಹೋಗುತ್ತಿರುವುದು ಕಂಡು ಬಂದಿತ್ತು. ಆ ವೇಳೆ ಐಶ್‌ಗೆ ಮುಜುಗರ ಉಂಟುಮಾಡಿತ್ತು. ಇದರ ಮಧ್ಯೆ ಇಬ್ಬರ ನಡುವೆ ಮನಸ್ತಾಪ ಇದೆ ಎಂದು ವರದಿಯಾಗಿತ್ತು. ಆದ್ರೆ ಇದೀಗ ಇದಕ್ಕೆಲ್ಲಾ ಐಶ್ ಹಾಗೂ ಅಭಿಷೇಕ್ ಬ್ರೇಕ್ ಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಜನಿ ಸರ್ ನನ್ನ ಬಳಿಗೆ ಬಂದು 'ಫೆಂಟಾಸ್ಟಿಕ್' ಆ್ಯಕ್ಟರ್ ಎಂದು ಹೇಳಿದ್ದಾರೆ - ರಾಧಿಕಾ ಆಪ್ಟೆ