Select Your Language

Notifications

webdunia
webdunia
webdunia
webdunia

ಸರಬ್ಜಿತ್ ಚಿತ್ರದಲ್ಲಿ ಐಶ್ವರ್ಯ ರೈ 15 ನಿಮಿಷಗಳ ಪಾತ್ರವಂತೆ..

Aishwarya rai
ಮುಂಬೈ , ಸೋಮವಾರ, 9 ಮೇ 2016 (11:29 IST)
ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಸರಬ್ಜಿತ ಚಿತ್ರದಲ್ಲಿ ಐಶ್ವರ್ಯ ರೈ ನಟಿಸುತ್ತಿರೋದು ನಿಮಗೆಲ್ಲಾ ಗೊತ್ತು.. ಈ ಚಿತ್ರದಲ್ಲಿ ಐಶ್ವರ್ಯ ರೈ ಅವರ ಪಾತ್ರದ ಕುರಿತು ಮತ್ತೊಂದು ಮಾಹಿತಿಯೊಂದು ಹೊರಬಿಂದಿದೆ. ಯೆಸ್, ಐಶ್ವರ್ಯ ಈ ಚಿತ್ರದಲ್ಲಿ ಕೇವಲ 15 ನಿಮಿಷಗಳು ಮಾತ್ರ ಕಾಣಿಸಿಕೊಳ್ಳಲಿದ್ದಾರೆ. 
ಈ ಬಗ್ಗೆ ಖುದ್ದು ಐಶ್ವರ್ಯ ರೈ ಪಾತ್ರದ ಕುರಿತು ನಿರ್ದೇಶಕ ಓಮಂಗ್ ಕುಮಾರ್ ಒಪ್ಪಿಕೊಂಡಿದ್ದಾರೆ... ಐಶ್ವರ್ಯ ರೈ 15 ನಿಮಿಷಗಳ ಕಾಲ ನಟಿಸಲು ಒಪ್ಪಿಕೊಂಡಿದ್ದರು ಎಂದು ತಿಳಿಸಿದ್ದಾರೆ. 
 
ಮುಖ್ಯ ಪಾತ್ರದಲ್ಲಿ ರಂದೀಪ್ ಹೂಡಾ ಹಾಗೂ ಐಶ್ವರ್ಯ ರೈ ಬಚ್ಚನ್ ಅವರ ಕಾಂಬಿನೇಷನ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇವರರಿಬ್ಬರ ನಟನೆ ನಿಜಕ್ಕೂ ಈ ಚಿತ್ರದಲ್ಲಿ ಸುಂದರವಾಗಿ ಮೂಡಿ ಬಂದಿದೆ. 
 
ನಿರ್ದೇಶಕ ಓಮಂಗ್ ಅವರ ಸರಬ್ಜಿತ್ ಚಿತ್ರ  ಕಥಾ ವಸ್ತು ಅದ್ಭುತವಾಗಿ ಹೆಣೆಯಲಾಗಿದೆ. ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಮನ  ಮುಟ್ಟುವಂತೆ ಮಾಡುತ್ತವೆ. ಇನ್ನೂ ಚಿತ್ರದ ಹೊಸ ಹಾಡು 'ದರ್ದ' ಉತ್ತಮವಾಗಿ ಮೂಡಿ ಬಂದಿದೆ.
 
ಅದಕ್ಕಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಇನ್ನೂ ಸೋನು ನಿಗಮ್ ಈ ಚಿತ್ರಕ್ಕೆ ಹಾಡು ಹಾಡಿದ್ದಾರೆ. ಸೋನು ಧ್ವನಿ ನಿಮ್ಮ ಹೃದಯ ತಟ್ಟದೇ ಇರದು. ಸರಬ್ಜಿತ್ ಸಿನಿಮಾ ಮೇ. 20ರಂದು ರಿಲೀಸ್ ಆಗಲಿದೆ. 
 
ಸರಬ್ಜಿತ್ ಚಿತ್ರದಲ್ಲಿ ಐಶ್ವರ್ಯ ದಲ್ಬಿರ್ ಕೌರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಐಶ್ವರ್ಯ ಅವರಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಆ್ಯಕ್ಟಿಂಗ್‌ನಿಂದ ಬ್ರೇಕ್ ತಗೆದುಕೊಳ್ತಾರಾ ಸಮಂತಾ ಪ್ರಭು?