Select Your Language

Notifications

webdunia
webdunia
webdunia
webdunia

'ಜಾಗ್ವಾರ್' ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಅ.3ಕ್ಕೆ ಶುರು

'ಜಾಗ್ವಾರ್' ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಅ.3ಕ್ಕೆ ಶುರು
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2016 (16:52 IST)
ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಗೌಡ 'ಜಾಗ್ವಾರ್' ಚಿತ್ರದ ಅಡ್ವಾನ್ಸ್ ಬುಕಿಂಗ್ ಅಕ್ಟೋಬರ್ 3ರಂದು ಶುರುವಾಗಲಿದೆ. ಚಿತ್ರಮಂದಿರಗಳಲ್ಲಿ ಅಕ್ಟೋಬರ್ 6ಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗ್ವಾರ್  ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳು, ಪ್ರೇಕ್ಷಕರು ಈ ಮೊದಲೇ  ನೀವೂ ಟಿಕೆಟ್ ಬುಕ್ ಮಾಡಬಹುದು. 

ಅಕ್ಟೋಬರ್ 3ರಂದು ಆನ್‌ಲೈನ್ ಟಿಕೆಟ್ ಬುಕಿಂಗ್ ಶುರುವಾಗಲಿದೆ. ಸಂತೋಷ ಚಿತ್ರಮಂದಿರವಲ್ಲದೇ ಕರ್ನಾಟಕ ಎಲ್ಲಾ ಚಿತ್ರಮಂದಿರಗಳಲ್ಲೂ ಅಕ್ಟೋಬರ್ 6ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ.  

ಈ ಚಿತ್ರವನ್ನು ನಿಖಿಲ್ ಕುಮಾರ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಹಾಗೂ ತೆಲಗು ಭಾಷೆಗಳಲ್ಲಿ ಚಿತ್ರ ರಿಲೀಸ್ ಕಾಣಲಿದ್ದು, ಜಗಪತಿ ಬಾಬು, ಆದಿತ್ಯ ಮೆನನ್ ಮುಂತಾದ ಕಲಾವಿದರಿದ್ದಾರೆ. 
 
ಜಗ್ವಾರ್' ಚಿತ್ರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ್‌ಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. ಜಾಗ್ವಾರ್ ಟೀಮ್ ಬಲ್ಗೇರಿಯಾದಿಂದ ಇತ್ತೀಚಿಗಷ್ಟೇ ವಾಪಸ್ ಆಗಿದ್ದು, ಚಿತ್ರವು ಶೂಟಿಂಗ್ ಕೊನೆಯ ಹಂತಕ್ಕೆ ಬಂದು ತಲುಪಿತ್ತು. 
 
ಸಿನಿಮಾದಲ್ಲಿ ಬರುವ ಮುನ್ನ ನಿಖಿಲ್‌ಗೆ ಆಕ್ಷನ್, ಡ್ರಾಮ, ಡ್ಯಾನ್ಸ್ ಎಲ್ಲವನ್ನು ಕಲಿಸಲಾಗಿದೆಯಂತೆ. ಅಷ್ಟೇ ಅಲ್ಲದೆ ಈಗ ನಿರ್ಮಿಸುವ ಚಿತ್ರ ಟಾಲಿವುಡ್ ಅಥ್ವಾ ಬಾಲಿವುಡ್ ರೀಮೇಕ್ ಆಗಿರುತ್ತದೆ ಎನ್ನುವ ಸಂಗತಿ ಕುಮಾರಸ್ವಾಮಿ ತಿಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪಕ ವಿಮಾನ ಚಿತ್ರದ ಆಡಿಯೋ ಅಕ್ಟೋಬರ್ 1ಕ್ಕೆ ರಿಲೀಸ್