Select Your Language

Notifications

webdunia
webdunia
webdunia
webdunia

'ಪುಷ್ಪಕ ವಿಮಾನ' ಚಿತ್ರದ ಆಡಿಯೋ ಅಕ್ಟೋಬರ್ 1ಕ್ಕೆ ರಿಲೀಸ್

'ಪುಷ್ಪಕ ವಿಮಾನ' ಚಿತ್ರದ ಆಡಿಯೋ ಅಕ್ಟೋಬರ್ 1ಕ್ಕೆ ರಿಲೀಸ್
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2016 (16:46 IST)
ಕನ್ನಡದಲ್ಲಿ ಮೂಡಿ ಬರುತ್ತಿರುವ 'ಪುಷ್ಪಕ ವಿಮಾನ' ಚಿತ್ರದ ಆಡಿಯೋ ಅಕ್ಟೋಬರ್ 1ರಂದು ರಿಲೀಸ್ ಆಗುತ್ತಿದೆ. 'ಪುಷ್ಪಕ ವಿಮಾನ' ಚಿತ್ರ ರಮೇಶ್ ಅರವಿಂದ್ ಅವರ 100 ನೇ ಚಿತ್ರ. ಈ ಚಿತ್ರವನ್ನು ವೆಂಕಯ್ಯ ಸಿನಿಮಾಸ್ ಹಾಗೂ ತೂಗುದೀಪ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಟ ರಮೇಶ್ ಅರವಿಂದ್,ರಚಿತಾ ರಾಮ್, ಯುವಿನಾ, ಜೂಹಿ ಚಾವ್ಲಾ, ರವಿ ಕಾಲೇ ಮುಂತಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಪವನ್ ಒಡೆಯರ್ ನಿರ್ದೇಶನದ 'ಪುಷ್ಪಕ ವಿಮಾನ 'ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಅಭಿನಯಿಸುತ್ತಿದ್ದಾರೆ.ಈ ಹಿಂದೆ ಕೂಡ ಕನ್ನಡದಲ್ಲಿ ಇದೇ ಹೆಸರಿನ ಸಿನಿಮಾ ಬಂದಿತ್ತು. ಸಿನಿಮಾದಲ್ಲಿ ಕಮಲ್ ಹಾಸನ್ ಅಭಿನಯಿಸಿದ್ದರು.
 
ಇಷ್ಟು ದಿನ ರಮೇಶ್ ಅರವಿಂದ್ ನಿರ್ದೇಶನ ಹಾಗೂ ಕಿರುತೆರೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.ಆದ್ರೂ ಅವರಿಗೆ ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನುವ ತುಡಿತ ಇತ್ತಂತೆ. ನಾನು ಮತ್ತೆ ಯಾವಾಗ ಕ್ಯಾಮರಾದ ಮುಂದೆ ಕಾಣಿಸಿಕೊಳ್ಳುತ್ತೇನೆ ಅಂತಾ ಕಾಯುತ್ತಿದ್ದೆ ಅಂತಾ ರಮೇಶ್ ಹೇಳಿದ್ದರು. ಅಲ್ಲದೇ ಈ ಸಿನಿಮಾದಲ್ಲಿ ನಾನು ನಿರ್ವಹಿಸುತ್ತಿರುವ ಪಾತ್ರ ನಾನು ಬಹು ದಿನಗಳಿಂದ ಈ ಪಾತ್ರ ಮಾಡ್ಬೇಕ  ಅಂತಾ ಕಾಯುತ್ತಿದ್ದ ಪಾತ್ರ ಅಂತಾ ಅವರು ಹೇಳಿದ್ದರು. 
 
ಇನ್ನು ಸಿನಿಮಾಕ್ಕೆ 'ಪುಷ್ಪಕ ವಿಮಾನ' ಅಂತಾ ಹೆಸರಿಡಲು ಕಾರಣ ಕೂಡ ಇದೆ. ಯಾಕಂದ್ರೆ ಇದು ವಿಮಾನಗಳ ಬಗ್ಗೆ ಕ್ರೇಜ್ ಇರುವ ವ್ಯಕ್ತಿಯೊಬ್ಬ ಕಥೆಯಾಧಾರಿತ ಸಿನಿಮಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

 
 

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ತುಪ್ಪದ ಹುಡುಗಿ ನಟಿ ರಾಗಿಣಿ