Webdunia - Bharat's app for daily news and videos

Install App

ಅಭಿಮಾನಿಗೆ ಹೊಡೆದು ಮೊಬೈಲ್ ಬಿಸಾಕಿ ಉದಿತ್ ನಾರಾಯಣ್ ಪುತ್ರ ಆದಿತ್ಯ ದುರ್ವರ್ತನೆ

Krishnaveni K
ಮಂಗಳವಾರ, 13 ಫೆಬ್ರವರಿ 2024 (12:12 IST)
Photo Courtesy: Twitter
ಮುಂಬೈ: ಬಹುಭಾಷಾ ಗಾಯಕ ಉದಿತ್ ನಾರಾಯಣ್ ಅವರ ಪುತ್ರ, ಗಾಯಕ ಆದಿತ್ಯ ನಾರಾಯಣ್ ಲೈವ್ ಕಾರ್ಯಕ್ರಮವೊಂದರಲ್ಲಿ ತೋರಿದ ದುರ್ವರ್ತನೆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾವಿರಾರು ಜನ ಸೇರಿದ್ದ ಲೈವ್ ಕಾರ್ಯಕ್ರಮದಲ್ಲಿ ಆದಿತ್ಯ ವೇದಿಕೆಯಲ್ಲಿ ಹಾಡುತ್ತಿದ್ದರು. ಈ ವೇಳೆ ವೇದಿಕೆಯ ಪಕ್ಕದಲ್ಲೇ ನಿಂತಿದ್ದ ಅಭಿಮಾನಿಯೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಒಂದು ಹಂತದಲ್ಲಿ ಸಿಟ್ಟಿಗೆದ್ದ ಆದಿತ್ಯ ಅಭಿಮಾನಿಗೆ ಹೊಡೆದು ಆತನ ಕೈಯಿಂದ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ದೂರಕ್ಕೆ ಜೋರಾಗಿ ಎಸೆದಿದ್ದಾರೆ. ಎಸೆದ ರಭಸಕ್ಕೆ ಮೊಬೈಲ್ ಪೀಸ್ ಪಿಸ್ ಆಗಿದೆ.

ಗಾಯಕನ ವರ್ತನೆಗೆ ಆಕ್ರೋಶ
ಸಾಮಾನ್ಯ ಜನರಿಗೆ ಒಂದು ಮೊಬೈಲ್ ಖರೀದಿ ಮಾಡುವುದು ಎಂದರೆ ಒಂದು ತಿಂಗಳ ಸಂಬಳ ಖರ್ಚು ಮಾಡಿದಂತೆ. ದುಬಾರಿ ಮೊಬೈಲ್ ನ್ನು ಕಿತ್ತು ಬಿಸಾಕಿದರೆ ಆತನಿಗೆ ಆಗುವ ನಷ್ಟ ಎಷ್ಟು ಎಂದು ಊಹಿಸಲೂ ಅಸಾಧ‍್ಯ. ಅಂತಹದ್ದರಲ್ಲಿ ಆದಿತ್ಯ ವರ್ತನೆ ಎಲ್ಲರ ಟೀಕೆಗೆ ಗುರಿಯಾಗಿದೆ.

ಆದಿತ್ಯ ಮೇಲಿನ ಅಭಿಮಾನದಿಂದ ಕಾರ್ಯಕ್ರಮ ವೀಕ್ಷಿಸಲು ಬಂದರೆ ಈ ರೀತಿ ವರ್ತಿಸುವುದು ಸರಿಯೇ? ಒಬ್ಬ ವಿನಯವಂತ ತಂದೆಯ ಮಗನಾಗಿ ಈ ರೀತಿ ನಡೆದುಕೊಳ್ಳುವುದು ಸರಿಯೇ? ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಹಿಂದೆ ಇದೇ ಆದಿತ್ಯ ಒಂದು ಅವಕಾಶ ಸಿಗಲಿ ಎಂದು ಕಣ್ಣೀರಿಟ್ಟಿದ್ದರು. ಇಂದು ಅದೇ ವ್ಯಕ್ತಿ ತನ್ನ ಕಾರ್ಯಕ್ರಮವನ್ನು ವೀಕ್ಷಿಸಲು ಬಂದ ಅಭಿಮಾನಿಯ ಮೊಬೈಲ್ ಎಸೆದು ಹಾಳುಮಾಡುವಷ್ಟು ದುರಹಂಕಾರ ಬಂದಿದೆ ಎಂದು ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದ ಕೂಲಿ

46ವರ್ಷಗಳ ಬಳಿಕ ಸ್ಕ್ರಿನ್ ಹಂಚಿಕೊಳ್ಳಲಿದ್ದಾರೆ ದಕ್ಷಿಣ ಭಾರತದ ಸ್ಟಾರ್ ನಟರು

ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ

ಮುಂದಿನ ಸುದ್ದಿ
Show comments