ಸ್ಯಾಂಡಲ್‌ವುಡ್ ನಟಿ ತಾರಾ ಕನ್ನಡದ ಅದೆಷ್ಟೋ ಚಿತ್ರಮಂದಿರಗಳಿಂದ ಕನ್ನಡದ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸೀಗುತ್ತಿಲ್ಲ ಎಂದು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ಚಲನಚಿತ್ರ ಮಂಡಳಿ ಸ್ಥಾಪಿಸಿರುವ ಹಲವು ಹಲವು ಚಿತ್ರಮಂದಿರಗಳ ಬಗ್ಗೆ ಆತಂಕವನ್ನು ಹೊರಹಾಕಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷೆ ಆಗಿದ್ದ ನಟಿ ತಾರಾ, ನಾಟಕದ ನೀತಿಗಳನ್ನು ಚಿತ್ರಗಳಲ್ಲಿ ಅಳವಡಿಸಿರುವುದರಿಂದಲೇ ಕನ್ನಡ ಚಿತ್ರಗಳು ಬೆಳವಣಿಕೆ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ನಟಿ ತಾರಾ ಹೇಳಿದ್ದಾರೆ
ಬೇರೆ ರಾಜ್ಯದ ಚಿತ್ರಗಳು ಕರ್ನಾಟಕದಲ್ಲಿ ರಿಲೀಸ್ ಆದ್ರೆ ಪ್ರೇಕ್ಷಕರಿಂದ ಹೆಚ್ಚಿನ ರೆಸ್ಪಾನ್ಸ್ ಸಿಗುತ್ತದೆ. ಅಲ್ಲದೇ ಗಲ್ಲಾಪೆಟ್ಟಿಗೆಯಲ್ಲಿ ಸಂಗ್ರಹವಾಗುತ್ತದೆ. ಇತರ ಭಾಷೆಯ ಚಲನಚಿತ್ರಗಳು ಕನ್ನಡ ಚಿತ್ರಗಳಿಗಿಂತ ಹೆಚ್ಚಿನ ಸ್ಕ್ರೀನಿಂಗ್‌ಗೆ ಅವಕಾಶ ಪಡೆಯಲಾಗುತ್ತದೆ ಎಂದರು.
ಇತ್ತೀಚಿನ ಉದಾಹರಣೆ ಎಂದರೆ ತೆಲಗು ಚಿತ್ರ ಜನತಾ ಗ್ಯಾರೇಜ್, ಈ ಚಿತ್ರ 350 ಚಿತ್ರನೃಮಂದಿರಗಳಲ್ಲಿ ತೆರೆ ಕಂಡಿದೆ. ಕನ್ನಡದಲ್ಲಿ ಈಗೀಗ ಹೊಸಬರ ಮೋಡಿ ಮಾಡುತ್ತಿರುವ ಸಂದರ್ಭದಲ್ಲಿ ಇಂತಹ ಸಮಸ್ಯೆ ಎದುರಾದರೆ, ಚಿತ್ರರಂಗದ ಗತಿ ಏನು...? ಉತ್ತಮ ಚಿತ್ರಗಳು ಪ್ರದರ್ಶನ ಕಾಣುತ್ತಿದ್ದರೂ, ವಾರಕ್ಕೆ ಎತ್ತಂಗಡಿ ಮಾಡಲಾಗುತ್ತದೆ. ಮಡಮಕ್ಕಿ ಚಿತ್ರಕ್ಕೆ ಒಳ್ಳೆಯ ಚಿತ್ರಗಳು ಬಂದಿದ್ದರೂ, ಚಿತ್ರಮಂದಿರ ಸಮಸ್ಯೆ ಎದುರಾಗಿದೆ. ಇಂತಹ ಸಿನಿಮಾಗಳನ್ನು ಉಳಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.