Select Your Language

Notifications

webdunia
webdunia
webdunia
webdunia

ನಟಿ ಸೋನಂ ಕಪೂರ್ ಮೈಮೇಲೆ ಪ್ರಜ್ಞೆ ಇರ್ಲಿಲ್ಲವೇ?

ನಟಿ ಸೋನಂ ಕಪೂರ್ ಮೈಮೇಲೆ ಪ್ರಜ್ಞೆ ಇರ್ಲಿಲ್ಲವೇ?
Mumbai , ಶುಕ್ರವಾರ, 3 ಮಾರ್ಚ್ 2017 (10:51 IST)
ಕಪೂರ್ ಖಾಂದಾನಿನ ಬೆಡಗಿ ಸೋನಂ ಕಪೂರ್ ಉಡುಗೆ ತೊಡೆಯಲ್ಲಿ ಎಲ್ಲರಿಗಿಂತಲೂ ಒಂದು ಕೈ ಮೇಲೆ ಎನ್ನಬಹುದು. ಮಾತಿನಲ್ಲೂ ಅಷ್ಟೆ ಅಳದೂ ತೂಗಿ ಪ್ರತಿಕ್ರಿಯಿಸುವ ಬೆಡಗಿ. ಇಂತಿಪ್ಪ ಸೋನಂ ಇತ್ತೀಚೆಗೆ ಮೈಮೇಲೆ ಪ್ರಜ್ಞೆ ಇಲ್ಲದಂತೆ ಬಟ್ಟೆ ತೊಟ್ಟುಬಂದು ತಮ್ಮ ಮೈಮಾಟ ತೋರಿದ್ದಾರೆ.
 
ಈ ರೀತಿ ಸನ್ನಿ ಲಿಯೋನ್ ಅಥವಾ ಪೂನಂ ಪಾಂಡೆ ಮಾಡಿದ್ದರೆ ಜನ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಸಭ್ಯತೆಯ ಎಲ್ಲೆ ಮೀರದ ಸೋನಂ ಕಪೂರ್ ಈ ರೀತಿ ಉಡುಗೆಯಲ್ಲಿ ಕಾಣಿಕೊಂಡಿರುವುದು ಅವರ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ. ಅವರ ಎಕ್ಸ್‌ಕ್ಲೂಸೀವ್ ಚಿತ್ರಗಳನ್ನು ’ಮಿಡ್‌ಡೇ’ ಪ್ರಕಟಿಸಿದೆ. 
 
ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ಕ್ಲೀವೇಜ್ ಪ್ರದರ್ಶನ ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿದೆ. ಆದರೆ ಆ ರೀತಿಯೂ ಮಾಡದ ಸೋನಂ ತಮ್ಮ ಎದೆ ಭಾಗವನ್ನು ಪ್ರದರ್ಶಿಸಿದ್ದಾರೆ. ದಿಶಾ ಪಟಾನಿ ಸಹ ಇದೇ ರೀತಿ ಮಾಡಿ ಅಂತರ್ಜಾಲದಲ್ಲಿ ಚರ್ಚೆಗೆ ಗ್ರಾಸವಾಗಿದ್ದರು. ಈಗ ಆ ಸ್ಥಾನವನ್ನು ಸೋನಂ ತುಂಬಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ ಶರ್ಟ್ ವಿವಾದ: ಕ್ಷಮೆ ಕೋರಿದ ಪ್ರಿಯಾಂಕಾ ಚೋಪ್ರಾ