Select Your Language

Notifications

webdunia
webdunia
webdunia
webdunia

ನಟಿ ರಾಖಿ ಸಾವಂತ್ ಬಂಧನ

ನಟಿ ರಾಖಿ ಸಾವಂತ್ ಬಂಧನ
ಮುಂಬೈ , ಮಂಗಳವಾರ, 4 ಏಪ್ರಿಲ್ 2017 (16:08 IST)
ಮಹರ್ಷಿ ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟಿ ರಾಖಿ ಸಾವಂತ್ ಅವರನ್ನ ಪಂಜಾಬ್ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ಖಾಸಗಿ ಚಾನಲ್ ಕಾರ್ಯಕ್ರಮವೊಂದರಲ್ಲಿ ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ವಾಲ್ಮೀಕಿ ಸಮುದಾಯದ ಧಾರ್ಮಿಕ  ಭಾವನೆಗಳಿಗೆ ರಾಖಿ ಸಾವಂತ್ ಧಕ್ಕೆಯುಂಟುಮಾಡಿದ್ದಾರೆ ಎಂದು ಆರೋಪಿಸಿ ದಾಖಲಾಗಿದ್ದ ದೂರಿನನ್ವಯ ಮಾರ್ಚ್ 9ರಂದು ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು. ಹಲವು ಬಾರಿ ಸಮನ್ಸ ಕೊಟ್ಟರೂ ರಾಖಿ ಸಾವಂತ್ ಕೋರ್ಟ್`ಗೆ ಹಾಜರಾಗದ ಹಿನ್ನೆಲೆಯಲ್ಲಿ ಮಾರ್ಚ್ 9ರಂದು ಬಂಧನ ವಾರೆಂಟ್ ಜಾರಿಯಾಗಿತ್ತು.

ಹಲವು ದಿನಗಳಿಂದ ರಾಖಿ ಸಾವಂತ್`ಗೆ ಹುಡುಕಾಟ ನಡೆಸಿದ್ದ ಪಂಜಾಬ್ ಪೊಲೀಸರು ಇವತ್ತು ಮುಂಬೈನಲ್ಲಿ ಬಂಧಿಸಿದ್ದಾರೆ. ಏಪ್ರಿಲ್ 10ರಂದು ಮುಂದಿನ ವಿಚಾರಣೆ ನಡೆಯಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದಲ್ಲಿ ಮಾತನಾಡಿ, ಕುಂದಾಪುರದ ನಂಟು ಬಿಚ್ಚಿಟ್ಟ ಜ್ಯೂ. ಎನ್ಟಿಆರ್