Select Your Language

Notifications

webdunia
webdunia
webdunia
webdunia

ಸಿಗರೇಟ್ ತುಟಿಗಚ್ಚಿದ ಬೆಡಗಿ ಕೃತಿ ಸನೋನ್

ಸಿಗರೇಟ್ ತುಟಿಗಚ್ಚಿದ ಬೆಡಗಿ ಕೃತಿ ಸನೋನ್
Mumbai , ಗುರುವಾರ, 9 ಫೆಬ್ರವರಿ 2017 (11:30 IST)
ಈಗೀಗ ಧಂ ಹೊಡೆಯುವುದರಲ್ಲಿ ಹುಡುಗಿಯರು ಹುಡುಗರನ್ನು ಮೀರಿಸುತ್ತಿದ್ದಾರೆ. ಕೆಲವು ನಟಿಯರು ಧಂ ಹೊಡೆಯುವುದು ಗುಟ್ಟಾಗೇನು ಉಳಿದಿಲ್ಲ. ಕೆಲವರು ಪಾತ್ರಕ್ಕಾಗಿ ಸಿಗರೇಟ್ ಹಚ್ಚಿದ್ದೂ ಉಂಟು. ಆ ಸಾಲಿಗೆ ಹೊಸ ಸೇರ್ಪಡೆ ಎಂದರೆ ಬಾಲಿವುಡ್ ನಟಿ ಕೃತಿ ಸನೋನ್.
 
ಇದುವರೆಗೂ ಧೂಮಪಾನವನ್ನೇ ಮಾಡಿರದ ಬೆಡಗಿಯೊಬ್ಬಳು ಪಾತ್ರಕ್ಕಾಗಿ ಸಿಗರೇಟ್ ಹಚ್ಚಿದ್ದಾರೆ. ಬರೇಲಿಕಿ ಬರ್ಫಿ ಎಂಬ ಚಿತ್ರದಲ್ಲಿ ಕೃತಿ ಸನೋನ್ ಸಿಗರೇಟ್ ತುಟಿಗಚ್ಚಿದ್ದಾರೆ. ಅಶ್ವಿನ್ ಐಯರ್ ತಿವಾರಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಕೃತಿ ಅವದು ಒಂದು ರೀತಿ ಗಂಡುಬೀರಿ ಪಾತ್ರವಂತೆ. ಹಾಗಾಗಿ ಸಿಗರೇಟು ಎನ್ನುತ್ತದೆ ಚಿತ್ರತಂಡ.
 
ಆಯುಷ್ಮಾನ್ ಖುರಾನಾ ಚಿತ್ರದ ನಾಯಕ. ಆರಂಭದಲ್ಲಿ ಸಿಗರೇಟ್ ಸೇದಲು ತುಂಬಾ ಪ್ರಯಾಸ ಪಡಬೇಕಾಯಿತಂತೆ. ಒಂದಷ್ಟು ಸಲ ಧಂ ಎಳೆದ ಮೇಲೆ ಟ್ರ್ಯಾಕ್‌ಗೆ ಬಂದರಂತೆ ಕೃತಿ ಸನೋನ್. "ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಿಗರೇಟ್ ಸೇದಲ್ಲ. ಪಾತ್ರಕ್ಕಾಗಿ ಈ ರೀತಿ ಮಾಡಬೇಕಾಯಿತು" ಎಂದಿದ್ದಾರೆ ಕೃತಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೂಪರ್ ಹಾಟ್ ಅವತಾರದಲ್ಲಿ ಅಮೀಶಾ ಪಟೇಲ್