Publish Date: Mon, 08 Oct 2018 (19:43 IST)
Updated Date: Mon, 08 Oct 2018 (19:47 IST)
ಮುಂಬೈ : ಪಾಕಿಸ್ತಾನದ ಗಾಯಕರನ್ನು ಪ್ರಮೋಟ್ ಮಾಡುತ್ತಿರುವುದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ವಿರುದ್ಧ ಗಾಯಕ ಅಭಿಜಿತ್ ಭಟ್ಟಾಚಾರ್ಯ ಕಿಡಿಕಾರಿದ್ದಾರೆ.
ಈ ಹಿಂದೆ ಬಾಲಿವುಡ್ ನ ಬಾದ್ ಶಾ ಶಾರುಕ್ ಖಾನ್ ಬಗ್ಗೆ ಬೇಸರಗೊಂಡಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಇದೀಗ ನಟ ಸಲ್ಮಾನ್ ಖಾನ್ ಪಾಕಿಸ್ತಾನದ ಗಾಯಕರಿಗೆ ಪ್ರಮೋಶನ್ ನೀಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ’ಸಲ್ನಾನ್ ಖಾನ್ ಅವರ ಸಿನಿಮಾಗಳಲ್ಲಿ ಹಾಡಲು ಪಾಕಿಸ್ತಾನದ ಗಾಯಕರನ್ನು ಏಕೆ ಪ್ರಮೋಟ್ ಮಾಡುತ್ತಿದ್ದಾರೆ. ಭಾರತೀಯ ಗಾಯಕರು ಅವರ ಸಿನಿಮಾದಲ್ಲಿ ಚೆನ್ನಾಗಿ ಹಾಡುವುದಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಹಾಗೇ ‘ಭಾರತೀಯ ಸಿನಿಮಾರಂಗದಲ್ಲಿ ಕೆಲಸ ಮಾಡದಂತೆ ಪಾಕಿಸ್ತಾನಿ ಕಲಾವಿದರಿಗೆ ನಿರ್ಬಂಧ ಹೇರಬೇಕು. ಒಂದು ಕಡೆ ಈ ಪಾಕಿಸ್ತಾನಿಗಳು ನಮ್ಮಸೈನಿಕರನ್ನು ಕೊಲ್ಲುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಸಲ್ಮಾನ್ ಪಾಕಿಸ್ತಾನದ ಪ್ರತಿಭೆಗೆ ಅವಕಾಶ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಮೈ ಹೂ ನಾ ಚಿತ್ರದ ನಂತರ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವುದನ್ನು ಯಾಕೆ ನಿಲ್ಲಿಸಿದೆ ಎಂಬುದನ್ನು ಹೇಳಿದ್ದಾರೆ. ನಾನು ಯಾವುದೇ ಖಾನ್ ಗಳ ಜತೆ ಮುಂದೆ ಹಾಡುವುದಿಲ್ಲ. ‘ಮೈ ಹೂ ನಾ’ ಸಮಯದಲ್ಲಿ ಎಲ್ಲರಿಗೂ ಸಲಾಂ ಹೊಡೆದು ಬದುಕಬೇಕಾದ ಸ್ಥಿತಿ ಇತ್ತು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.