ಮುಂಬೈ: ಪೈಲಟ್ ಗಳ ಕೊರತೆಯಿಂದ ಮುಂಬೈಯಿಂದ ಚೆನ್ನೈಗೆ ತೆರಳಬೇಕಿದ್ದ ಜೆಟ್ ಏರ್ ವೇಸ್ ಸಂಸ್ಥೆಯ ವಿಮಾನ ವಿಳಂಬವಾಗಿದ್ದಕ್ಕೆ ನಟ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
“ಚೆನ್ನೈಗೆ ತೆರಳುತ್ತಿದ್ದೇನೆ. ಬ್ಯಾಗ್ ಚೆಕ್ಕಿಂಗ್, ವಿಮಾನ ಸರಿಯಾದ ಸಮಯಕ್ಕೆ ಬೋರ್ಡ್ ಆಯ್ತು. ಸೀಟ್ ಬೆಲ್ಟ್ ಹಾಕಿಕೊಂಡಿದ್ದೇನೆ. ಎಲ್ಲವೂ ಮಾಡಿದ್ದೇನೆ. ಆದರೆ ಪೈಲಟ್ ಗಳೇ ಬೇಕಾಗಿದ್ದಾರೆ” ಎಂದು ತಮ್ಮ ಟ್ವೀಟರ್ ಪೇಜ್ ನಲ್ಲಿ ವ್ಯಂಗ್ಯ ಮಾಡಿದ್ದಾರೆ.
ಅವರು ಚೆನ್ನೈಗೆ ತೆರಳಬೇಕಿದ್ದ ವಿಮಾನ 10. 30 ಕ್ಕೆ ಹಾರಬೇಕಿತ್ತು. ಆದರೆ ಪೈಲಟ್ ಗಳಿಲ್ಲದೇ 11. 50 ಕ್ಕೆ ಹಾರಾಟ ನಡೆಸಿತು. ಈ ಬಗ್ಗೆ ಜೆಟ್ ಏರ್ ವೇಸ್ಅಧಿಕಾರಿಗಳನ್ನು ಕೇಳಿದಾಗ ಪೈಲಟ್ ಗಳಿಲ್ಲ ಎಂಬ ಉತ್ತರ ಬಂದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ