Select Your Language

Notifications

webdunia
webdunia
webdunia
webdunia

ಐಶ್ವರ್ಯಾ ಪತಿ ಅಭಿಷೇಕ್ ಬಚ್ಚನ್ ಹೊಸ ಲವ್ ಸ್ಟೋರಿ!

ಐಶ್ವರ್ಯಾ ಪತಿ ಅಭಿಷೇಕ್ ಬಚ್ಚನ್ ಹೊಸ ಲವ್ ಸ್ಟೋರಿ!
Mumbai , ಶುಕ್ರವಾರ, 12 ಮೇ 2017 (06:53 IST)
ಮುಂಬೈ: ಅರೇ.. ಇದೇನಾಗಿ ಹೋಯ್ತು ನಮ್ಮ ಮಂಗಳೂರು ಬೆಡಗಿ ಐಶ್ ಸಂಸಾರಕ್ಕೆ? ಅವಳ ಪ್ರೀತಿಯ ಪತಿ ಪರಮೇಶ್ವರ ಬೇರೆ ಹುಡುಗಿ ಹಿಂದೆ ಸುತ್ತಲು ಪ್ರಾರಂಭಿಸಿಬಿಟ್ಟನಾ? ಹಾಗಂತ ಗಾಬರಿಯಾಗಬೇಡಿ.

 
ಅಷ್ಟಕ್ಕೂ ಅಭಿಷೇಕ್ ಹೊಸ ಲವ್ ಸ್ಟೋರಿಯೊಂದರಲ್ಲಿ ಸಿಕ್ಕಿ ಹಾಕಿಕೊಂಡಿರುವುದಂತೂ ನಿಜ. ಆದರೆ ಇದು ಸಿನಿಮಾ ವಿಷ್ಯ. ಸಂಜಯ್ ಲೀಲಾ ಬನ್ಸಾಲಿ ಸಾರಥ್ಯದಲ್ಲಿ ಅಭಿ ಹೊಸದೊಂದು ಲವ್ ಸ್ಟೋರಿ ಸಬ್ಜೆಕ್ಟ್ ಇರುವ ಸಿನಿಮಾ ಮಾಡಲಿದ್ದಾರಂತೆ.

ಯುವ ನಿರ್ದೇಶಕ ರೋಹಿತ್ ರಾಯ್ ಇದಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಸುದ್ದಿಯಾಗಿದೆ. ಅಭಿಗೆ ನಾಯಕಿಯಾಗಿ ಪ್ರಿಯಾಂಕ ಚೋಪ್ರಾ ಅಭಿನಯಿಸಲಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ಯಾವುದೂ ಪಕ್ಕಾ ಆಗಿಲ್ಲ.

ಎಲ್ಲವೂ ಮಾತುಕತೆಯ ಹಂತದಲ್ಲಿದೆಯಂತೆ. ಸದ್ಯಕ್ಕೆ ಬ್ರೇಕ್ ನಿರೀಕ್ಷೆಯಲ್ಲಿರುವ ಅಭಿಷೇಕ್ ಬಚ್ಚನ್ ಈ ಮೂಲಕವಾದರೂ ಯಶಸ್ಸು ಸಿಗುತ್ತಾ ಎಂದು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ತಿಗುಡಿ ಚಿತ್ರ ಬಿಡುಗಡೆಗೆ ಒಂದು ದಿನ ಮುನ್ನವೇ ಉದಯ್,, ಅನಿಲ್ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ವಿತರಣೆ