Select Your Language

Notifications

webdunia
webdunia
webdunia
webdunia

ಅತ್ಯಧಿಕ ವಸೂಲಿ ಮಾಡಿದ ಚಿತ್ರಗಳು ಇವೇ ಅಂತೆ!

ಅತ್ಯಧಿಕ ವಸೂಲಿ ಮಾಡಿದ ಚಿತ್ರಗಳು ಇವೇ ಅಂತೆ!
Mumbai , ಸೋಮವಾರ, 9 ಜನವರಿ 2017 (08:56 IST)
ದೇಶದಾದ್ಯಂತ ಇದುವರೆಗೂ ಅತ್ಯಧಿಕ ವಸೂಲಿ ಮಾಡಿದ ಬಾಲಿವುಡ್ ಚಿತ್ರವಾಗಿ ಅಮೀರ್ ಖಾನ್ ಅಭಿನಯದ ’ದಂಗಲ್’ ಹೊರಹೊಮ್ಮಿದೆ ಎಂದು ಸಿನಿ ವಿಮರ್ಶಕ ತರಣ್ ಆದರ್ಶ್ ಹೇಳಿದ್ದಾರೆ. ಬಾಕ್ಸ್ ಆಫೀಸಲ್ಲಿ ಇದುವರೆಗೂ ಮುಂಚೂಣಿಯಲ್ಲಿದ್ದ ’ಪಿಕೆ’ ಚಿತ್ರವನ್ನು ಭಾನುವಾರ ದಂಗಲ್ ಹಿಂದಿಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ.
 
ಮೊದಲ ಸ್ಥಾನದಲ್ಲಿ ದಂಗಲ್; ಎರಡನೇ ಸ್ಥಾನದಲ್ಲಿ ಪಿಕೆ; ಮೂರನೇ ಸ್ಥಾನದಲ್ಲಿ ಬಾಜಿರಾವ್ ಮಸ್ತಾನಿ, ನಾಲ್ಕರಲ್ಲಿ ಸುಲ್ತನ್, ಐದರಲ್ಲಿ ಧೂಮ್ 3 ಚಿತ್ರಗಳಿವೆ ಎಂದು ಹೇಳಿದ್ದಾರೆ ತರಣ್ ಆದರ್ಶ್. ಈ ಮೂಲಕ ಅಮೀರ್ ಖಾನ್ ನಂಬರ್ ಒನ್ ಎನ್ನುವುದು ಸಾಬೀತಾದಂತಿದೆ.
 
ದಂಗಲ್ ಮೂರನೇ ವಾರದಲ್ಲಿ ಶುಕ್ರವಾರ ರೂ.6.66 ಕೋಟಿ, ಶನಿವಾರ ರೂ.10.80 ಕೋಟಿ ಸೇರಿದರೆ ಇದುವರೆಗೆ ರೂ.330.96 ಕೋಟಿ ಕಲೆಕ್ಷನ್ ಮಾಡ್ದಿದೆ. ವಿದೇಶಗಳಲ್ಲಿ ಶನಿವಾರದ ಹೊತ್ತಿಗೆ (ಜ.7) 25.58 ದಶಲಕ್ಷ ಡಾಲರ್ (ರೂ.174.30 ಕೋಟಿ) ವಸೂಲಿ ಮಾಡಿದೆ. ಯೂಎಸ್ಎ, ಕೆನಡ, ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ಚಿತ್ರ ದಂಗಲ್ ಎಂದಿದ್ದಾರೆ ತರಣ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಬಾಹುಬಲಿ 2’ ಚಿತ್ರದ ಟ್ರೇಲರ್ ಯಾವಾಗ?