Select Your Language

Notifications

webdunia
webdunia
webdunia
webdunia

ಹರ್ಷವರ್ಧನ ಕಪೂರ್ ಬಗ್ಗೆ ಶ್ತಾಘನೆ ವ್ಯಕ್ತಪಡಿಸಿದ ಅಮಿರ್ ಖಾನ್

ಹರ್ಷವರ್ಧನ ಕಪೂರ್ ಬಗ್ಗೆ ಶ್ತಾಘನೆ ವ್ಯಕ್ತಪಡಿಸಿದ ಅಮಿರ್ ಖಾನ್
ದೆಹಲಿ , ಶುಕ್ರವಾರ, 24 ಜೂನ್ 2016 (18:39 IST)
ಅನಿಲ್ ಕಪೂರ್ ಪುತ್ರ ಹರ್ಷವರ್ಧನ ಅಭಿನಯದ ಮುಂಬರುವ ಚಿತ್ರ ಮಿರ್ಜಿಯಾ ಚಿತ್ರಕ್ಕಾಗಿ ಬಾಲಿವುಡ್ ನಟ ಅಮಿರ್ ಖಾನ್ ಹೊಗಳಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅಮಿರ್ ಖಾನ್ ರೋಮ್ಯಾಂಟಿಕ್ ಡ್ರಾಮಾ ಕಥೆಯನ್ನು ಒಳಗೊಂಡ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,  ಹರ್ಷವರ್ಧನ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. 

ಚಿತ್ರತಂಡಕ್ಕೆ 'ಗುಡ್ ಲಕ್' ಎಂದು ಅಮಿರ್ ಖಾನ್ ಇದೇ ವೇಳೆ ಹೇಳಿದ್ದಾರೆ. ಟ್ರೇಲರ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. 
 
ನಿರ್ಮಾಪಕ ರಾಕೇಶ್ ಓಮ್ ಕಶ್ಯಪ್ ಮೆಹರಾ ಅವರ ಬಹುನಿರೀಕ್ಷಿತ ಚಿತ್ರ ಮಿರ್ಜಿಯಾ ಚಿತ್ರದ ಟ್ರೇಲರ್ ಕುತೂಹಲ ಮೂಡಿಸಿದೆ. ಇವತ್ತು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್ ಸಾಕಷ್ಟು ಸುದ್ದಿ ಮಾಡುತ್ತಿದೆ.
ಚಿತ್ರದ ಟ್ರೇಲರ್‌ನ್ನು ಹೆಚ್ಚು ಜನ ಲೈಕ್ ಮಾಡುತ್ತಿದ್ದಾರೆ. 
 
ಇನ್ನೂ ಈ ಚಿತ್ರದಲ್ಲಿ ಅನಿಲ್ ಕಪೂರ್ ಪುತ್ರ ಹರ್ಷವರ್ಧನ ನಟಿಸಿದ್ದಾರೆ. ಚಿತ್ರದ ಕಥೆ ಹಾಗೂ ಸಂಗೀತವನ್ನು ಗುಲ್ಜರ್ ಬರೆದಿದ್ದಾರೆ. ಮಿರ್ಜಿಯಾ ಚಿತ್ರ ಪಂಜಾಬ್‌ನ ಪ್ರಸಿದ್ಧ ಯುಗಲ್ ಮಿರ್ಜಾ ಹಾಗೂ ಸಾಹಿಬಾ ಪ್ರೇಮ ಆಧಾರಿತ ಚಿತ್ರ ಇದಾಗಿದ್ದು, ಚಿತ್ರ 7 ಅಕ್ಟೋಂಬರ್‌ಗೆ ರಿಲೀಸ್ ಆಗಲಿದೆ. 
 
ಇನ್ನೂ ವಿಶೇಷವೆಂದ್ರೆ ಈ ಟ್ರೇಲರ್‌ನಲ್ಲಿ ಹರ್ಷವರ್ಧನ ಲುಕ್ ಸಖತ್ತಾಗಿ ಮೂಡಿ ಬಂದಿದೆ. ಎಲ್ಲೆಡೆ ಹವಾ ಮಾಡುತ್ತಿದ್ದು, ಕೆಲ ತಿಂಗಳಿನಿಂದ ಹರ್ಷವರ್ಧನ ಪಬ್ಲಿಕ್ ಪ್ಲೇಸ್‌ಗಳಲ್ಲಿ ಬರುವುದನ್ನು ನಿಲ್ಲಿಸಿದ್ದರು. ಅಲ್ಲದೇ ನನ್ನ ಸಹೋದರ ಹೆಚ್ಚು ಮನೆಯಲ್ಲೇ ಇರುತ್ತಾನೆ ಎಂದು ಸೋನಮ್ ಕೂಡ ಹೇಳಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ರಣಬೀರ್‌ ಮತ್ತೆ ಒಟ್ಟಿಗೆ ತೆರೆ ಮೇಲೆ ತರಲಿರುವ ಸಂಜಯ್ ಲೀಲಾ ಬನ್ಸಾಲಿ