Webdunia - Bharat's app for daily news and videos

Install App

ಶಾರೂಖ್ -ಸಲ್ಲು ಸೈಕ್ಲಿಂಗ್‌‌ನಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ- ಅಮಿರ್ ಖಾನ್

Webdunia
ಮಂಗಳವಾರ, 5 ಜುಲೈ 2016 (18:31 IST)
ಬಾಲಿವುಡ್ ಸ್ಟಾರ್‌ಗಳಾದ ಸಲ್ಮಾನ್ ಹಾಗೂ ಶಾರೂಖ್ ಸೈಕ್ಲಿಂಗ್‌ನಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಸುದ್ದಿ ಮಾಡಿದ್ದರು. ಇಬ್ಬರು  ಜತೆಗೂಡಿ ಮಾಲಿನ್ಯವನ್ನು ನಿಯಂತ್ರಿಸುವಂತೆ  ಅಭಿಮಾನಿಗಳಿಗೆ ಕರೆ ನೀಡಿದ್ದರು. ಸಲ್ಮಾನ್ ಹಾಗೂ ಶಾರೂಖ್ ಅಮಿರ್ ಖಾನ್‌ಗೆ ಸ್ನೇಹಿತರಾಗಿದ್ದಾರೆ. ಅಮಿರ್ ಖಾನ್ ಮುಂಬರುವ ಚಿತ್ರ ದಗಾಂಲ್ ಚಿತ್ರದ ಪೋಸ್ಟರ್ ರಿಲೀಸ್ ವೇಳೆ ಶಾರೂಖ್-ಸಲ್ಮಾನ್ ಕುರಿತು ಕೇಳಲಾದ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದಾರೆ. 
'ಅವರಿಬ್ಬರು ನನ್ನ ಸ್ನೇಹಿತರು'.. 'ಬೇರೆಯೊಬ್ಬರ ಸ್ನೇಹಿತರಲ್ಲ. ಅವರಿಬ್ಬರು ಸೈಕ್ಲಿಂಗ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಸೈಕ್ಲಿಂಗ್‌ನಲ್ಲಿ ಭಾಗಿಯಾಗುವುದರ ಮೂಲಕ ಶಾರೂಖ್ ಹಾಗೂ ಸಲ್ಮಾನ್ ಇಬ್ಬರು ಜತೆಗೂಡಿ ಕೆಲ ಸಮಯ ಕಳೆದಿರುವುದರ ಕುರಿತು ಖುಷಿಯಾಗಿದೆ ಎಂದು ತಿಳಿಸಿದ್ದಾರೆ. 
 
ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈನ ರೋಡ್‌ನಲ್ಲಿ ಇಬ್ಬರು ಸೈಕ್ಲಿಂಗ್ ನಲ್ಲಿ ಭಾಗಿಯಾಗಿದ್ದು ವೈರಲ್ ಆಗಿತ್ತು. ಟ್ವಿಟರ್‌ನಲ್ಲಿ ಶಾರೂಖ್ ಫೊಟೋಗಳನ್ನು ಅಭಿಮಾನಿಗಳಿಗೆ ಹಾಗೂ ಫಾಲೋವರ್ಸ್‌ಗಳಿಗೆ ಶೇರ್ ಮಾಡಿದ್ದರು. 'ಭಾಯಿ ಭಾಯಿ ನೋ ಬೈಕ್ ರೈಡ್' ,ಮೈಕಲ್ ಲಾಲ್ ಸೈಕಲ್ ಲಾಲ್ ಎಂದು ಎಸ್‌ಆರ್‌ಕೆ ಕ್ಯಾಪ್ಶನ್ ನೀಡಿದ್ದರು. ಮಾಲಿನ್ಯವನ್ನು ತಡೆಗಟ್ಟಲು ಶಾರೂಖ್ ಹಾಗೂ ಸಲ್ಮಾನ್ ಸಂದೇಶ ನೀಡಿದ್ದಾರೆ.

ಚಿತ್ರವು ಕುಸ್ತಿಪಟು ಮಹಾವೀರ್‌ ಸಿಂಗ್‌ ಪೋಗಟ್‌ ಅವರ ಜೀವನ ಆಧಾರಿತ ಕತೆಯಾಗಿದೆ. ಮಹಾವೀರ್‌ ತಮ್ಮ ಮಕ್ಕಳಾದ ಗೀತಾ ಪೋಗಟ್‌ ಮತ್ತು ಬಬಿತಾ ಕುಮಾರಿ ಅವರಿಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ತಾವೇ ಕೋಚ್ ಆಗಿದ್ರು.
 
ಕುಸ್ತಿ ಪಟುವಿನ ದೇಹಕ್ಕಾಗಿ ಅಮೀರ್ ಈಗಾಗ್ಲೇ ವರ್ಕ್ ಔಟ್ ಮಾಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಮೀರ್, ಕಿರಣ್ ರಾವ್, ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಿಸುತ್ತಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಅಮಿರ್ ಖಾನ್ ಚಿತ್ರವನ್ನು ನೋಡಲು ಅಭಿಮಾನಿಗಳು ಡಿಸೆಂಬರ್ ವರೆಗೂ ಕಾಯಲೇಬೇಕು. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ