Webdunia - Bharat's app for daily news and videos

Install App

ಮಾಯಾ ಬಳಿಕ.. ಮತ್ತೊಂದು ಹಾರರ್ ಚಿತ್ರದಲ್ಲಿ ನಯನಾ ತಾರಾ

Webdunia
ಮಂಗಳವಾರ, 5 ಜುಲೈ 2016 (17:59 IST)
ಇವರೆಗೂ ಗ್ಲಾಮರ್ ಪಾತ್ರದಲ್ಲಿ, ಪ್ರತಿಭೆಗೆ ಅವಕಾಶವಿರುವ ಪಾತ್ರಗಳ ಮೂಲಕ ಹೆಸರು ಗಳಿಸಿದ್ದ ತಾರೆ ನಯನತಾರ. ಸಿನಿಮಾ ಅಲ್ಲದೆ ವೈಯುಕ್ತಿಕ ಬದುಕಲ್ಲೂ ಸಹಿತ ಆಕೆಯು ಅನೇಕ ರೀತಿಯಲ್ಲಿ ಜನರಿಗೆ ಗೊತ್ತಾದ ಚೆಲುವೆ. ಎರಡು ಬಾರಿ ಪ್ರಣಯದಲ್ಲಿ ಸೋಲು, ಮದುವೆ ವಿಷಯದಲ್ಲಿ ನೋವು ಹೀಗೆ ಹಲವಾರು ಸಂಗತಿಗಳು ಅಲ್ಲದೇ ಆಕೆ ತನ್ನ ನಟನೆ, ಗೆಲುವಿನ ಮೂಲಕವೂ ಸಹಿತ ಹೆಚ್ಚು ಹೆಚ್ಚು ಪ್ರಚಲಿತದಲ್ಲಿರುವ ನಟಿ. 

ಮಾಯಾ ಚಿತ್ರದ ಬಳಿಕ ಇದೀಗ ಮತ್ತೊಮ್ಮೆ ಭಯ ಪಡಿಸಲು ನಯನಾತಾರ ಬರುತ್ತಿದ್ದಾರೆ. ಆಕೆ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಯನಾತಾರಾ ಮತ್ತೆ ಹಾರರ್ ಚಿತ್ರದ ಮೂಲಕ ತೆರೆಗೆ ಬರಲಿದ್ದಾರೆ. ಮುಂಬರುವ ಮತ್ತೊಂದು ಹಾರರ್ ಚಿತ್ರದಲ್ಲಿ ನಯನತಾರಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 
 
'ಮಾಯಾ' ಚಿತ್ರದ ಬಳಿಕ ನಯನತಾರಾ ಮತ್ತೊಂದು ಚಿತ್ರದ ಮೂಲಕ ಬಿಗ್ ಸ್ಕ್ರೀನ್ ಮೂಲಕ ಮಿಂಚಲಿದ್ದಾರೆ, ಮಾಯಾ ಎನ್ನುವ ಹೆಸರಿನ ಹಾರರ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಅಶ್ವಿನಿ ಶರವಣನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ಮಯೂರಿ ಹೆಸರಲ್ಲಿ ಆ ಚಿತ್ರವನ್ನು ಕೆ. ಕಲ್ಯಾಣ್ ಅವರು ಬಿಡುಗಡೆ ಮಾಡಿದ್ದರು.

ನಯನತಾರಾ ಅಭಿನಯಿಸಿದ್ದ ಮಾಯಾ ಟಾಲಿವುಡ್‌ನಲ್ಲಿ ಬಿಗ್ ಹಿಟ್ ನೀಡಿತ್ತು. ಮಾಯಾ ಚಿತ್ರದಿಂದ ಅಪಾರ ಪ್ರೇಕ್ಷಕರನ್ನು ಪಡೆದುಕೊಂಡಿದ್ದಲ್ಲದೇ, ಅತಿ ಹೆಚ್ಚು ಗಳಿಕೆ ಕಾಣುವ ಚಿತ್ರಗಳಲ್ಲಿ ಇದು ಕೂಡ ಒಂದಾಗಿತ್ತು. 
 
ಇನ್ನೂ ಚಿತ್ರದಲ್ಲಿ ನಯನಾತಾರ ತಂದೆ ಪಾತ್ರದಲ್ಲಿ ತಂಬಿ ರಾಮಯ್ಯ ನಟಿಸುತ್ತಿದ್ದಾರೆ. ಹರ್ಷಾ ಉತ್ತನಮ್ ಸೈಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇನ್ನೂ ಈ ಚಿತ್ರದಲ್ಲಿ ವಿಕ್ರಂ,ನಯನತಾರಾ, ನಿತ್ಯಾ ಮೆನನ್ ಲೀಡ್ ರೋಲ್‌ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments