Select Your Language

Notifications

webdunia
webdunia
webdunia
webdunia

ಸಂಗೀತ ನಿರ್ದೇಶಕಿಯಾಗಿ ಅಮೀರ್ ಖಾನ್ ಮಗಳು

ಸಂಗೀತ ನಿರ್ದೇಶಕಿಯಾಗಿ ಅಮೀರ್ ಖಾನ್ ಮಗಳು
Mumbai , ಸೋಮವಾರ, 20 ಫೆಬ್ರವರಿ 2017 (09:00 IST)
ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಗಳು ಸಿನಿಮಾ ಕ್ಷೇತ್ರಕ್ಕೆ ಅಡಿಯಿಡುತ್ತಿರುವುದು ಹೊಸದಲ್ಲ. ಶಾರುಖ್ ಖಾನ್, ಸೈಫ್ ಆಲಿ ಖಾನ್, ಶ್ರೀದೇವಿ ಮಕ್ಕಳು ಬೆಳ್ಳಿಪರದೆ ಅಡಿಯಿಟ್ಟಿರುವ ಬಗ್ಗೆ ಬಿಟೌನ್‌ನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಮಗಳು ಇರಾ ಸಹ ಸಿನಿಮಾ ಕ್ಷೇತ್ರಕ್ಕೆ ಅಡಿಯಿಡುತ್ತಿದ್ದಾರೆ.
 
ಆದರೆ ಉಳಿದವರಂತೆ ಇರಾ ಬಣ್ಣಹಚ್ಚದೆ ಸಂಗೀತ ನಿರ್ದೇಶಕಿಯಾಗಿ ಬಣ್ಣದ ಪ್ರಪಂಚಕ್ಕೆ ಕಾಲಿಡಲು ಹೊರಟಿದ್ದಾರೆ. ಇರಾಗೆ ಚಿಕ್ಕಂದಿನಿಂದ ಸಂಗೀತ ಎಂದರೆ ತುಂಬಾ ಇಷ್ಟವಂತೆ. ಆ ಆಸಕ್ತಿ ಇರುವ ಕಾರಣ ಸಂಗೀತವನ್ನೂ ಕಲಿತಿದ್ದಾರಂತೆ. 
 
ಇಷ್ಟೆಲ್ಲಾ ಕಲಿತರೂ ಸಂಗೀತವನ್ನೇ ತನ್ನ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಎಂದೂ ಅಂದುಕೊಂಡಿರಲಿಲ್ಲವಂತೆ. ಆದರೆ ಈಗ ಅದೇ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಅಮೀರ್ ಖಾನ್ ನಿರ್ಮಿಸಿರುವ ದಿಲ್ಲಿ ಬೆಲ್ಲಿ, ತಲಾಷ್ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ ರಾಮ್ ಸಂಪತ್ ಬಳಿ ಶಿಷ್ಯೆಯಾಗಿ ಕೆಲಸ ಮಾಡಿ ಸಂಗೀತ ಸಾಗರಕ್ಕೆ ಧುಮುಕ
ಲಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆ ಒಂದು ಸನ್ನಿವೇಶಕ್ಕಾಗಿ ರೂ.12 ಕೋಟಿ ಖರ್ಚು!